ಅತ್ಯಧಿಕ ಸಾಲದ ಬಜೆಟ್; ಹರ್ಷಾನಂದ ಗುತ್ತೇದಾರ ವ್ಯಂಗ್ಯ

0
18

ಆಳಂದ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ಜನಪರವಾಗಿರದೇ ಕೇವಲ ಗ್ಯಾರಂಟಿ ಯೋಜನೆಗಳನ್ನು ಹೊಂದಿಸಲು ಜನಸಾಮಾನ್ಯರ ಮೇಲೆ ತೆರಿಗೆ ಹೇರಿರುವ ಬಜೆಟ್ ಆಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ತೆರಿಗೆ, ಸಾರಿಗೆ ತೆರಿಗೆ ಮತ್ತು ಗಣಿ ಮತ್ತು ಭೂವಿಜ್ಞಾನ ತೆರಿಗೆಗಳನ್ನು ಹೆಚ್ಚಿಸಿ ಜನಸಾಮಾನ್ಯರ ಮೇಲೆ ಅಧಿಕ ಪ್ರಮಾಣದ ಹೊರೆ ಹಾಕಿದೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ಒಂದು ರೀತಿಯಿಂದ ಸೇಡಿನ ಕ್ರಮದ ಬಜೆಟ್ ಆಗಿದೆ. ಈ ಹಿಂದಿನ ಸರ್ಕಾರ ಪ್ರಸ್ತಾಪಿಸಿದ್ದ ಅನೇಕ ಜನಪರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ, ಜಿಲ್ಲೆಗೊಂದು ಗೋಶಾಲೆ, ಕೃಷಿ ಭೂಮಿ ಮಾರಾಟ ಕಾಯಿದೆ, ವಿವೇಕ ಶಾಲಾ ಅಭಿವೃದ್ಧಿ ಯೋಜನೆ, ಮಹಿಳಾ ಸ್ತ್ರೀ ಸಾಮಥ್ರ್ಯ, ಮಹಿಳೆಯರ ಸ್ವಸಹಾಯ ಸಂಘದ ಸಹಾಯ ಧನ, ಭೂ ಸಿರಿಯಡಿ ನೀಡುವ 10 ಸಾವಿರ, 500 ರೂ ನೀಡುವ ಶ್ರಮ ಶಕ್ತಿ ಯೋಜನೆ, ಅಗ್ನಿವೀರ ತರಬೇತಿಗೆ ಸಹಾಯಧನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೇವಲ ರಾಜಕೀಯ ಕಾರಣದಿಂದ ರದ್ದು ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಇದಾಗಿದೆ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ, ಅನುತ್ಪಾದಕ ವಲಯಕ್ಕೆ ಮೀಸಲಾಗಿದೆ. ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆಯ ಹೇರಿಕೆಯನ್ನು ಜನಸಾಮಾನ್ಯರ ಮೇಲೆ ಹೇರಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here