ಕಲಬುರಗಿ; ಕಾಂಗ್ರೆಸ್ ಬಹುಮತದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿರುವ ಬಜೆಟ್ ಇಡೀ ಕರ್ನಾಟಕ ರಾಜ.್ವನ್ನ ಪ್ರಗತಿ ಪಥದತ್ತ ಕೊಂಡೊಯ್ಯುವ ತಾಕತ್ತು ಹೊಂದಿದೆ. ಅದರಲ್ಲೂ ಹಿಂದುಳಿದ ಕಲ್ಯಾಣ ನಾಡಿನ ಪ್ರಗತಿಗೂ ಈ ಬಜೆಟ್ ವರವಾಗಲಿದೆ. ಕೆಕೆಆರ್ಡಿಬಿಗೆ ನುಡಿದಂತೆ 5 ಸಾವಿರ ಕೋಟಿ ರು ಅನುದಾನ ಬಜೆಟ್ನಲ್ಲಿ ಮೀಡಸಿಡಲಾಗಿದೆ. ಹಿಂದುಳಿದ ಪ್ರದೇಶದ ಪ್ರಗತಿಗೆ ನಮ್ಮ ಇಚ್ಚಾಶಕ್ತಿ ಈ ಮೂಲಕ ಪ್ರದರ್ಶಿಸಿz್ದÉೀವೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಹೇಳಿಕೆ ನೀಡಿರುವ ಅವರು ಕೆಕೆಆರ್ಡಿಬೆ 5 ಸಾವಿರ ಕೋಟಿ ರು ಜೊತೆಗೇ ಕಲ್ಯಾಣದ ಜಿಲ್ಲೆಗಳಲ್ಲಿ ಸಮುದಾಯ ಶೌಚಗೃಹಗಳಿಗೆ 100 ಕೋಟಿ ರು, ಪ್ರಗತಿ ಆಕಾಂಕ್ಷೆಯ ತಾಲೂಕುಗಳ ಪ್ರಗತಿಗೆ 3 ಸಾವಿರ ಕೋಟಿ ರು ಮೀಸಲಿಡಲಾಗಿದೆ. ಕಲಬುರಗಿಗೆ ಟ3ಆಮಾ ಕೇರ್ ಸೆಂಟರ್, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹೀಗೆ ನೂರಾರು ಕೇಟಿ ರುಪಾಯಿಯಲ್ಲಿ ಆಸ್ಪತ್ರೆಗಳು, ಆರೋಗ್ಯ ಸೇವೆ ದಕ್ಕಿದೆ. ಹಾಗೇ ನೋಡಿದಲ್ಲಿ ವಾಸ್ತವದಲ್ಲಿ ಸಾವಿರ ಕೋಟಿ ರುಪಾಯಿ ಕಲ್ಯಾಣಕ್ಕೆ ದಕ್ಕಿದಂತಾಗಿದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕಲಬುರಗಿ ಕೋಟೆ, ಮಳಖೇಡ, ಸನ್ನತಿ, ಬಹಮನಿ ಕೋಟೆ, ಇಲ್ಲಿನ ಮ್ಯೂಸಿಯಂ ಅಭಿವೃದ್ಧಿಗೂ ಬಜೆಟ್ನಲ್ಲಿ ಯೋಜನೆ ಘೋಷಿಸಲಾಗಿದೆ. ಯೂಕೆಪಿ 3 ನೇ ಹಂತದ ಯೋಜನೆಯ ಭೂಸ್ವಾಧೀನ ಹಾಗೂ ಪುನಾವಸತಿಗೂ ಹಣ ನೀಡಲಾಗಿದೆ. ಇದಲ್ಲದೆ ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಕೆಕೆಆರ್ಡಿಬಿ 5 ಸಾವಿರ ಕೋಟಿ ರು ಅನುದಾನ ತುಂಬ ವರದಾನವಾಗಲಿದೆ. ಒಟ್ಟಾರೆ ನೋಡಿದರೆ ರಾಜ್ಯದ ಬಜೆಟ್ ಪ್ರಾದೇಶಿಕ ಅಸಮತೋಲನ ನಿವಾರಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇಟ್ಟಂತಹ ದಿಟ್ಟ ಹೆಜ್ಜೆಯಾಗಿದೆ ಎಂದು ಅಲ್ಲಂಪ್ರಭು ಪಾಟೀಲ್ ಬಣ್ಣಿಸಿದ್ದಾರೆ.