ನೆಮ್ಮದಿಯ ಬಾಳಿಗೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ: ಪಿಐ ರಾಘವೇಂದ್ರ

0
10

ಶಹಾಬಾದ: ವಾಹನ ಚಾಲಕರು ಮತ್ತು ಪಾದಚಾರಿಗಳು ನೆಮ್ಮದಿಯ ಬಾಳಿಗೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ’ ಎಂದು ನಗರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ.ಎಸ್.ಹೆಚ್ ಹೇಳಿದರು.

ಅವರು ನಗರದ ಬಸವೇಶ್ವರ ವೃತ್ತದಲ್ಲಿ ಪೆÇಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾರ್ವಜನಿಕರು ರಸ್ತೆ ಸುರಕ್ಷತೆ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು .ಶಿಸ್ತಿನ ಸಂಚಾರ, ಸುಗಮ ಸಂಚಾರಕ್ಕೆ ಹಾದಿ ಎಂಬುದನ್ನು ತಿಳಿದಿರಬೇಕು. ಇಲ್ಲವಾದಲ್ಲಿ ಅಪಾಯಕಾರಿ. ಈ ನಿಟ್ಟಿನಲ್ಲಿ ಪೆÇಲೀಸ್ ಇಲಾಖೆ ‘ರಸ್ತೆ ಸುರಕ್ಷಾ ಸಪ್ತಾಹ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

Contact Your\'s Advertisement; 9902492681

ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಇದರ ಉದ್ದೇಶ.

‘ನೆಮ್ಮದಿಯ ಬಾಳಿಗೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ’ ಎಂಬುದು ಈ ಸಪ್ತಾಹದ ಪ್ರಮುಖ ವಿಷಯ. ಪೆÇಲೀಸರ ಭಯದಿಂದ ಮಾತ್ರ ಹೆಲ್ಮೆಟ್ ಧರಿಸುವುದು ಬಿಟ್ಟು ನಮ್ಮ ರಕ್ಷಣೆಗಾಗಿಯಾದರೂ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಅವರು ಯಾವುದೇ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಅದರಿಂದ ಆದ ಸಾವು ನೋವುಗಳು ಮಾತ್ರ ಅವರ ಕುಟುಂಬಕ್ಕೆ ಗೊತ್ತಾಗುತ್ತದೆ. ಪೆÇಲೀಸರು ರಸ್ತೆ ಸುರಕ್ಷತೆಯ ಹೆಸರಿನಲ್ಲಿ ಕೇಸ್ ಮಾಡುತ್ತಾರೆ ಎಂಬುದನ್ನು ಬಿಟ್ಟು ನಮ್ಮ ರಕ್ಷಣೆಯ ಮುಖ್ಯವಾಗಿ ನಾವೆಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬೇಕಾಗಿದೆ ಎಂದರು.

ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಿದ್ದು ಸಾರ್ವಜನಿಕರು ಪೊಲೀಸ್ ಇಲಾಖೆಯ ಜೊತೆಯಲ್ಲಿ ಸಹಕರಿಸಬೇಕು. ತಾವು ಹೆಲ್ಮೆಟ್ ಧರಿಸುವ ಜೊತೆಗೆ ತಮ್ಮ ಸುತ್ತಲಿನ ಅವರಿಗೂ ಅಪಘಾತದ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ನಿಂಗಣ್ಣಗೌಡ. ಬಸವರಾಜ ಮಳ್ಳಿ, ದೊಡ್ಡಪ್ಪ, ಹುಸೇನ್ ಪಟೇಲ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here