ಲಾಕ್‌ಡೌನ್ ತೆರವಾದರೂ ಸೊಂಕಿಗೆ ನಿಷ್ಕಾಳಜಿ ಬೇಡ

0
26

ವಾಡಿ: ಮಹಾಮಾರಿ ಕೊರೊನಾ ಸೊಂಕು ಚಿತ್ತಾಪುರ ತಾಲೂಕಿನಲ್ಲಿ ಇಳಿಮುಖ ಕಂಡಿದೆ. ಜಿಲ್ಲೆಯಾದ್ಯಂತ ಇದರ ತಗ್ಗುವಿಕೆ ಕಾಣುತ್ತಿದ್ದೇವೆ. ಲಾಕ್‌ಡೌನ್ ತೆರವಾದರೂ ಸೊಂಕಿಗಿರುವ ಕಾನೂನುಗಳು ಮುಂದು ವರೆಯಲಿವೆ. ಜನತೆ ನಿಷ್ಕಾಳಜಿಯಿಂದ ತಿರುಗಿದರೆ ಮುಂದೆ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ ಪಾಟೀಲ ಹೇಳಿದರು.

ಪುರಸಭೆ ಆಡಳಿತ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಮಹಾತ್ಮಾಗಾಂಧಿ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಬೀದಿ ವ್ಯಾಪಾರಿಗಳಿಗೆ ಮತ್ತು ಉದ್ಯಿಮೆದಾರರಿಗೆ ಕೋವಿಶೀಲ್ಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಿತ್ತಾಪುರ ತಾಲೂಕಿನಲ್ಲಿ ಜನರ ಅಸಹಕಾರದ ನಡುವೆಯೂ ಈಗಾಗಲೇ ೩೬೦೦೦ ಜನರಿಗೆ ಲಸಿಕೆ ನೀಡಲಾಗಿದೆ. ಮನೆ ಬಾಗಿಲಿಗೆ ಬಂದು ಕುಂಕುಮ ಹಚ್ಚಿ ಕರೆದರೂ ಜನರು ಲಸಿಕೆ ಪಡೆಯಲು ಬರುತ್ತಿರಲಿಲ್ಲ. ಕೊನೆಯ ಗಳಿಗೆಯಲ್ಲಿ ಜನರು ಲಸಿಕೆಗಾಗಿ ಬೇಡಿಕೆಯಿಟ್ಟು ಪರದಾಡುತ್ತಿದ್ದಾರೆ. ಒಂದು ಸಾವಿರ ಜನರಿಗಾಗುವಷ್ಟು ಲಸಿಕೆ ತಾಲೂಕಿಗೆ ತರಿಸಿಕೊಂಡಿದ್ದೇವೆ. ಅಗತ್ಯಬಿದ್ದರೆ ಮತ್ತಷ್ಟು ತರಿಸಿಕೊಳ್ಳಲಾಗುವುದು ಎಂದರು.

Contact Your\'s Advertisement; 9902492681

ತೈಲ ದರ ಏರಿಕೆ ವಿರುದ್ಧ ಎಸ್‌ಯುಸಿಐ ಪ್ರತಿಭಟನೆ

ಮಾಸ್ಕ್, ಸ್ಯಾನಿಟೈಸರ್ ಬಳಕೆಯ ಮಹತ್ವ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯತೆಯ ಕುರಿತು ವ್ಯಾಪಕವಾಗಿ ಪ್ರಚಾರ ಕೈಗೊಂಡ ಕಾರಣ ಕ್ರೂರಿ ಕೊರೊನಾ ಸೊಂಕು ವ್ಯಾಪಕವಾಗಿ ಹರಡದಂತೆ ಕಟ್ಟಿಹಾಕಲು ಸಾಧ್ಯವಾಗಿದೆ. ಇದಕ್ಕೆ ಜನರ ಸಹಕಾರವೂ ದೊರೆತಿದೆ. ಸದ್ಯ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಅಭಿಯಾನ ಆರಂಭಿಸಿದ್ದೇವೆ. ಗ್ರಾಮೀಣ ಭಾಗದ ಜನರಿಂದ ಗಂಟಲು ದ್ರವ ಪಡೆಯುವ ಕಾರ್ಯ ನಿರಂತರವಾಗಿದ್ದು, ಸೊಂಕಿನ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗುತ್ತಿವೆ. ಲಸಿಕೆ ಬಗ್ಗೆ ಅಪನಂಬಿಕೆ ಹೊಂದದೆ ಧೈರ್ಯವಾಗಿ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ವಿವರಿಸಿದರು.

ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಡಾ.ರಿಜೀವುಲ್ಲಾ ಖಾದ್ರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ ನಿರೀಕ್ಷಣಾಧಿಕಾರಿ ಅನಿತಾ ಮಲಗೊಂಡ, ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ, ಪುರಸಭೆ ಸಮುದಾಯ ಸಂಘಟಕ ಕಾಶೀನಾಥ ಧನ್ನಿ, ಕಂದಾಯ ಅಧಿಕಾರಿ ಎ.ಪಂಕಜಾ, ಆರೋಗ್ಯ ನೈರ್ಮಲ್ಯ ನಿರೀಕ್ಷಕ ಬಸವರಾಜ ಪೂಜಾರಿ, ಈಶ್ವರ ಅಂಬೇಕರ, ರಾಹುಲ ಹುಗ್ಗಿ, ವಿಜಯಕುಮಾರ ಸಿಂಗೆ ಸೇರಿದಂತೆ ಶುಶ್ರೂಷಕಿಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here