ರಟಕಲ್ ದರ್ಗಾದ ಸಮಸ್ಯೆ ಶಾಂತಿಯುತ ಇತ್ಯಾರ್ಥಕ್ಕಾಗಿ ಎಸ್.ಪಿಗೆ ಭೇಟಿ

0
103

ಕಲಬುರಗಿ: ಮೋಹರಂ ಹಬ್ಬ ಸಮಿಪಿಸುತ್ತಿದ್ದು, ರಟಕಲ್ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾಕ್ಕೆ ಪೊಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆ ತೆರವುಗೊಳ್ಳಿಸುವ ನಿಟ್ಟಿನಲ್ಲಿ ಶಾಂತಿ ಸೌಹಾರ್ತೆಯಿಂದ ಸಮಸ್ಯೆ ಇತ್ಯಾರ್ಥ ಪಡೆಸಿಕೊಳ್ಳವ ಸಲುವಾಗಿ ಗುರುವಾರ ಎಸ್.ಪಿ ಕಚೇರಿಗೆ ಸೌಹಾರ್ದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ನಿಯೋಗ ಭೇಟಿ ನೀಡಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶಾ ಪಂತ್ ನಿಂಬರ್ಗಾಕ್ಕೆ ತೆರಳಿದರಿಂದ ಸಹಾಯಕ ಅಧಿಕಾರಿಯಾಗಿರುವ ಡಿಸಿಪಿ ಜಾಕೀರ್ ಇನಾಮದಾರ್ ಗೆ ನಿಯೋಗ ಭೇಟಿಯಾಗಿ, ಗ್ರಾಮದಲ್ಲಿ ಸೌಹಾರ್ದತೆಯಿಂದ ಮೋಹರಂ ಹಬ್ಬ ಆಚರಿಸಲಾಗುತ್ತದೆ. ಈ ವೇಳೆಯಲ್ಲಿ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾಕ್ಕೆ ಸರ್ವಧರ್ಮಿಯರು ನೈವಿದ್ಯ ಹಾಗೂ ಕಂದೂರಿಯಂತಹ ಪ್ರಸಾದವನ್ನು ನೀಡುವ ವಾಡಿಕೆ ಗ್ರಾಮದಲ್ಲಿ ಇದೆ.

Contact Your\'s Advertisement; 9902492681

ರಟಕಲ್ ಗ್ರಾಮ ಪಂಚಾಯಿತ್ ಸರ್ವಾನುಮತದಿಂದ ದರ್ಗಾಕ್ಕೆ ಇರುವ ಇರುವ ಐತಿಹಾಸಿಕ ದಾರಿ ಬೀಡಬೇಕೆಂದು ನಿರ್ಣಯ ಮಂಡಿಸಿದರು. ದಾರಿ ಬಿಡುತ್ತಿಲ್ಲ. ತಕ್ಷಣ ದರ್ಗಾಕ್ಕೆ ಇರುವ ದಾರಿ ಬಿಡಬೇಕೆಂದು ಮನವಿ ಮಾಡಲಾಯಿತು. ಈ ಕುರಿತು ಇಂದು ಅಥವಾ ನಾಳೆ ಎಸ್.ಪಿ ಅವರೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ದರ್ಗಾದ ಐತಿಹಾಸಿ ದಾರಿ ಬೀಡುವುದಾಗಿ ಡಿಸಿಪಿ ಜಾಕೀರ್ ಇನಾಮದಾರ್ ಅವರು ಭರವಸೆ ನೀಡಿದರು.

ಜುಲೈ 19 ರಂದು ರಟಕಲ್ ಗ್ರಾಮ ಪಂಚಾಯಿತ್ ಆವರಣದಲ್ಲಿ ಅನಿರ್ಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತವಾಗಿ ಸಮಸ್ಯೆ ಇತ್ಯಾರ್ಥಪಡಿಸಿಕೊಳ್ಳೊಣ ಎಂದು ಎಸ್.ಪಿ ಅವರ ಭೇಟಿಗೆ ಬಂದಿರುವುದಾಗಿ ರಟಕಲ್ ಸೌಹಾರ್ದ ಸಮಿತಿಯ ಸದಸ್ಯರು ತಿಳಿಸಿದರು. ಸಮಸ್ಯೆ ಇತ್ಯಾರ್ಥವಾಗಿಲ್ಲಂದ್ರೆ ಅನಿವಾರ್ಯವಾಗಿ ಉಗ್ರಹೋರಾಟವೇ ದಾರಿ ಎಂದು ತಿಳಿಸಿದರು.

ಮೋದಿನ್ ಸಾಬ, ನಸೀರ್ ಕಟ್ಟೋಳಿ, ಕಲೀಮ್ ಕಟ್ಟೋಳಿ, ಮೊಹಮ್ಮದ್ ಹುಲಕುಂದಾ, ಶೀವರಾಯ್ಯ ಮುತ್ಯಾ, ಶೌಕತ್ ಕುಮಸಿ, ಹಮೀದ್ ಮಿಯ್ಯಾ ಸುಲೇಗಾಂವ, ಖಾಸೀಮ್ ಮಾಸೂಲ್ದಾರ್, ಮಹೆಮೂದ್ ಕೋರ್ಬಾ, ಮಹೇಬೂಬ್ ಸಾಬ್ ಮಹಾಗಯಿ, ಹಮೀದ್ ಬೋದ್ಲಿ, ಪಾಶಾ ಮಿಯ್ಯಾ ಕೋರ್ಬಾ, ಮಹೇಬುಬ್ ಗೌಂಡಿ, ನಬಿ ಚೌಧರಿ, ಬಾಬು ಸಾಬ ಸುಲೇಗಾಂವ, ಮಶಾಕ ಜೀವಣಿಗಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here