ಸಕ್ರಿಯ ಕ್ಷಯರೋಗ ಆಂದೋಲನ

0
11

ಚಿಂಚೋಳ್ಳಿ:  ಜಿ ಪಂ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಮತ್ತು ಜಿಲ್ಲಾ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ. ಹಾಗೂ ತಾಲ್ಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವುಗಳ ಸಂಯೋಗದಲ್ಲಿ, ಚಿಂಚೋಳ್ಳಿ  ತಾಲ್ಲೂಕಿನ‌ ಚಂದಾಪುರ ಪಟ್ಟಣದ  ಗಣೇಶ ನಗರದಲ್ಲಿ ಸಕ್ರಿಯ ಕ್ಷಯರೋಗ ‌ಆಂದೋಲನ ಕಾರ್ಯಕ್ರಮ ಜುಲೈ 17 ರಿಂದ ಅಗಸ್ಟ್ 2 ರವರೆಗೆ ನಡೆಯಲಿರುವ.

ಮನೆ‌- ಮನೆ ಭೇಟಿ ಸಮೀಕ್ಷೆ ಮಾಡಿ ಕ್ಷಯರೋಗ ಲಕ್ಷಣಗಳ ಮಾಹಿತಿ ನೀಡಿ ಸಂಶಯಾಸ್ಪದ ಜನರ ಕಫಾದ ಮಾದರಿ ಸಂಗ್ರಹಿಸಲಾಗುತ್ತದೆ ಇದರ ಜಿಲ್ಲಾ ಮೇಲ್ವಿಚಾರಣೆ ಮಾಡಲು ಜಿಲ್ಲಾ ‌ಡಿ ಆರ್ ಟಿಬಿ ಸಮಾಲೋಚಕ  ಮಂಜುನಾಥ ಕಂಬಾಳಿಮಠ, ಮನೆ – ಮನೆ ಭೇಟಿ ನೀಡಿದ ಮನೆಗೆ ಮರು ಪರಿಶೀಲನೆ ಮಾಡಿದರು.

Contact Your\'s Advertisement; 9902492681

ಚಂದಪುರ ಪಟ್ಟಣ ಹಾಗೂ ಚಿಂಚೋಳ್ಳಿ ಬಡಾವಣೆ ಯಲ್ಲಿ 5 ತಂಡಗಳು ರಚಿಸಲಾಗಿದೆ ಅದರಂತೆ. ದನಗರ ಗಲ್ಲಿ, ಸುಂದರ ನಗರ, ಗಣೇಶ ನಗರ, ಮೌಲಾ ಗಲ್ಲಿ, ಎಸ್ ಸಿ ಗಲ್ಲಿ ಗಳಲ್ಲಿ ಸರ್ವೇ ಕಾರ್ಯಚರಣೆ ನಡೆಸಲಾಗುತ್ತಿದೆ. ಚಿಂಚೋಳ್ಳಿ ತಾಲ್ಲೂಕು ಹಿರಿಯ ಕ್ಷಯರೋಗ ಮೇಲ್ವಿಚಾರಕ ದಿನೇಶ ವಾಡೆಕರ್, ತಾಲ್ಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್ ಮೊರೆ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಯ ತಮ್ಮನೂರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ  ಸರಿತಾ ಮಳಗೆ, ರೂಪ ಸಂಪತ್ ಕುಮಾರ್ ಹಾಗೂ ದಿನಕ್ಕೆ 50 ಮನೆಗಳಂತೆ ತಂಡ 1 ಮತ್ತು 5  ತಂಡಗಳು ಆಂದೋಲನ ಸಮೀಕ್ಷೆ ನಡೆಯುತ್ತಿದೆ‌. ಅಂಗನವಾಡಿ ಸಹಾಯಕಿ ಲಕ್ಷ್ಮೀ,  ಮನೆ ಭೇಟಿ ಸರ್ವೇಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here