ಕಲಬುರಗಿ: ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ್ ಅವರ ನಿರ್ದೇಶನದ ಮೇರೆಗೆ ಭಾರತೀಯ ಬೌದ್ಧ ಮಹಾಸಭಾ ಮಹಾಗಾಂವ ಹೋಬಳಿ ಶಾಖೆಯ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಮಹಾಗಾಂವ ಕ್ರಾಸ್‍ನಲ್ಲಿರುವ ಬುದ್ಧ ವಿಹಾರ ಧಮ್ಮುರ (ಆರ್‍ಸಿ) ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಭೂಸಣಗಿ ಗ್ರಾಮದ ರಿತೇಶ ಪಿ. ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಗಾಂವ ಗ್ರಾಮದ ಅಂಕುಶ ಹರಸುಕರ್, ಸಂಸ್ಕಾರ ವಿಭಾಗ ಉಪಾಧ್ಯಕ್ಷರಾಗಿ ಮಹಾಗಾಂವ ಕ್ರಾಸ್‍ನ ರೋಹಿದಾಸ್ ಸೂರ್ಯವಂಶಿ, ಕಣ್ಣೂರಿನ ಸುಭಾಶ ಜಿ. ಕಣ್ಣೂರ, ಸಮತಾ ಸೈನಿಕ ದಳ ವಿಭಾಗ ಉಪಾಧ್ಯಕ್ಷ ಮಹಾದೇವ ತಳಕೇರಿ (ಧಮ್ಮುರ), ಕಾರ್ಯದರ್ಶಿಯಾಗಿ ಕಗ್ಗನಮಡಿ ಗ್ರಾಮದ ಭರತ್ ಭಾವಿಕಟ್ಟಿ, ಪ್ರಚಾರ ಮತ್ತು ಪ್ರವಾಸ ವಿಭಾಗದ ಉಪಾಧ್ಯಕ್ಷರಾಗಿ ಹರಕಂಚಿ ಗ್ರಾಮದ ಗೌತಮ್ ದೊಡ್ಮನಿ, ಖಜಾಂಚಿಯಾಗಿ ಕುರಿಕೋಟಾ ಗ್ರಾಮದ ಲೊಕೇಶ ಅಮಾತ್ತೇಕರ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಪ್ರಕಾಶ್ ಹಾಗರಗಿ, ಅಶೋಕ ಬಬಲಾದ, ತಾಲೂಕ ಅಧ್ಯಕ್ಷ ರಮೇಶ ಬೆಳಕೋಟಿ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಈಟಿ, ಸಂಸ್ಕಾರ ವಿಭಾಗ ಉಪಾಧ್ಯಕ್ಷ ಮಹೇಂದ್ರ ಸಿಂಗೆ, ಕಾರ್ಯದರ್ಶಿಗಳಾದ ರಮೇಶ ಕಾಂಬ್ಳೆ, ಸುಧಾಕರ್ ಕಗ್ಗನಮಡಿ, ಪ್ರಚಾರ ಮತ್ತು ಪ್ರವಾಸ ವಿಭಾಗ ಉಪಾಧ್ಯಕ್ಷರಾದ ಅಶೋಕ ಗೌರೆ, ಕಾರ್ಯದರ್ಶಿ ನಾಗೇಶ ಭೂಪತಿ, ಚಿದಂಬರಾವ ಶೇಖರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜೈಭೀಮ ಬಂಧುಗಳೇ, ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ ನಿಂಬಾಳ್ಕರ್ ರವರ ನಿರ್ದೇಶನದ ಮೇರೆಗೆ ಇಂದು 23 ರಂದು ಬುದ್ಧ ವಿಹಾರ ಧಮ್ಮುರ (ಆರ್ ಸಿ) ಮಹಾಗಾಂವ ಕ್ರಾಸ್ ನಲ್ಲಿ ಭಾರತೀಯ ಬೌದ್ಧ ಮಹಾಸಭಾ ಮಹಾಗಾಂವ ಹೋಬಳಿ ಶಾಖೆಯ ಪದಾಧಿಕಾರಿಗಳ ನೇಮಕ ಸಭೆಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಮುಖಂಡರಾದ ಪ್ರಕಾಶ್ ಹಾಗರಗಿ, ಅಶೋಕ ಬಬಲಾದ, ತಾಲೂಕ ಅಧ್ಯಕ್ಷರಾದ ರಮೇಶ ಬೆಳಕೋಟಿ, ಪ್ರ ಕಾ. ಅವಿನಾಶ್ ಈಟಿ, ಸಂಸ್ಕಾರ ವಿಭಾಗ ಉಪಾಧ್ಯಕ್ಷರಾದ ಮಹೇಂದ್ರ ಸಿಂಗೆ,ಕಾರ್ಯದರ್ಶಿಗಳಾದ ರಮೇಶ ಕಾಂಬ್ಳೆ, ಸುಧಾಕರ್ ಕಗ್ಗನಮಡಿ, ಪ್ರಚಾರ ಮತ್ತು ಪ್ರವಾಸ ವಿಭಾಗ ಉಪಾಧ್ಯಕ್ಷರಾದ ಅಶೋಕ ಗೌರೆ, ಕಾರ್ಯದರ್ಶಿ ನಾಗೇಶ ಭೂಪತಿ, ಚಿದಂಬರಾವ ಶೇಖರ ಹಾಗೂ ಮಹಾಗಾಂವ ಹೋಬಳಿಯಲ್ಲಿ ಎಲ್ಲ ಗ್ರಾಮಗಳ ಬೌದ್ಧ ಉಪಾಸಕ /ಉಪಾಸಕೀಯರು, ಡಾ. ಬಿ ಆರ್ ಅಂಬೇಡ್ಕರ್ ರ ಅನುಯಾಯಿಗಳು ಭಾಗವಹಿಸಿದ್ದರು ಅವರೆಲ್ಲರ ಒಪ್ಪಿಗೆ ಮೇರೆಗೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳು : 1)ಅಧ್ಯಕ್ಷರು:-ರಿತೇಶ ಪಿ ಭಾವಿಕಟ್ಟಿ, (ಭೂಸಣಗಿ) ಪ್ರಧಾನ ಕಾರ್ಯದರ್ಶಿಯಾಗಿ :-ಅಂಕುಶ ಹರಸುರಕರ್, (ಮಹಾಗಾಂವ) ಸಂಸ್ಕಾರ ವಿಭಾಗ ಉಪಾಧ್ಯಕ್ಷರು :-1)ರೋಹಿದಾಸ್ ಸೂರ್ಯವಂಶಿ(ಮಹಾಗಾಂವ ಕ್ರಾಸ್) 2)ಸುಭಾಶ ಜಿ ಕಣ್ಣೂರ, (ಕಣ್ಣುರ) ಸಮತಾ ಸೈನಿಕ ದಳ ವಿಭಾಗ ಉಪಾಧ್ಯಕ್ಷರು :-ಮಹಾದೇವ ತಳಕೇರಿ (ಧಮ್ಮುರ) ಕಾರ್ಯದರ್ಶಿ :-ಭರತ್ ಭಾವಿಕಟ್ಟಿ (ಕಗ್ಗನಮಡಿ) ಪ್ರಚಾರ ಮತ್ತು ಪ್ರವಾಸ ವಿಭಾಗ :ಉಪಾಧ್ಯಕ್ಷರು :-ಗೌತಮ್ ದೊಡ್ಮನಿ (ಹರಕಂಚಿ) ಖಜಾಂಚಿಯಾಗಿ :-ಲೊಕೇಶ ಅಮಾತ್ತೇಕರ್ (ಕುರಿಕೋಟಾ)