ಬಿ ಆರ್ ಪಾಟೀಲಗೆ ಕೃತಜ್ಞತಾಭಾವ ಇಲ್ಲ

0
488
BR PATIL HARSHAND GUTTEDAR

ಕಲಬುರಗಿ: ಆಳಂದ ಶಾಸಕ ಬಿ ಆರ್ ಪಾಟೀಲರಿಗೆ ಕೃತಜ್ಞತಾಭಾವ ಇಲ್ಲ ವಿಧಾನಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರಿನ ಮೇಲೆ ಚುನಾವಣೆ ಗೆದ್ದು ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಅಷ್ಟೇ ಅಲ್ಲದೇ ಸಚಿವ ಪ್ರಿಯಾಂಕ ಖರ್ಗೆ ಮೇಲೆ ಸ್ವಜನ ಪಕ್ಷಪಾತ ಮತ್ತು ಭೃಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪತ್ರ ಬರೆದಿರುವುದು ಅವರೇ ಆದರೆ ಪಕ್ಷದಲ್ಲಿ ಒತ್ತಡ ಬಂದಾಗ ಅದನ್ನು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ. ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಹಾಕುವುದು ಅವರ ಹಳೆಯ ಚಾಳಿಯಾಗಿದೆ. ಈ ಹಿಂದೆಯೂ ಕೂಡ ರಾಜ್ಯಸಭೆ ಚುನಾವಣೆಯಲ್ಲಿ ಹಣದ ಬೇಡಿಕೆ ಇಟ್ಟು ಸಿಕ್ಕಿ ಹಾಕಿಕೊಂಡಾಗ ಮಾಧ್ಯಮದವರ ಮೇಲೆ ಆರೋಪ ಹೊರಿಸಿದ್ದರು

Contact Your\'s Advertisement; 9902492681

ಪತ್ರ ಬರೆದಿರುವುದು ಸತ್ಯ ಪತ್ರಕ್ಕೆ ಸಹಿ ಮಾಡಿರುವುದು ಸತ್ಯ ಎಂದು ಮಾಜಿ ಸಚಿವ, ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕ ಶಾಸಕರು ಮಾಧ್ಯಮಗಳಲ್ಲಿ ಒಪ್ಪಿಕೊಂಡಿದ್ದಾರೆ. ವೈರಲ್ ಆಗಿರುವ ಪತ್ರವೇ ನಿಜವಾದುದ್ದು ಆದರೆ ಶಾಸಕ ಬಿ ಆರ್ ಪಾಟೀಲ ಈ ವಿಷಯ ಪಕ್ಷದಲ್ಲಿ ಸಂಚಲನ ಮೂಡಿಸುತ್ತಿದ್ದಂತೆ ಉಲ್ಟಾ ಹೊಡೆದು ಬೇರೊಂದು ಪತ್ರ ಹರಿಯಬಿಟ್ಟು ಮುಜುಗರದಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ಸ್ವಜನಪಾತ ಎಂಬ ಶಬ್ದ ಬಳಸಿರುವುದಕ್ಕೆ ಕಾರಣವೆನೆಂದರೆ ಕಲಬುರಗಿ ಲೋಕೋಪಯೋಗಿ ಇಲಾಖೆಯಲ್ಲಿ ತಮಗೆ ಬೇಕಾದ ಅಧಿಕಾರಿಯೊಬ್ಬರನ್ನು ಹಾಕಿಕೊಳ್ಳಲು ಐವರು ಶಾಸಕರು ಪತ್ರ ಕೊಟ್ಟಿದ್ದರು ಆ ಅಧಿಕಾರಿಯ ಜೊತೆ ಹಣದ ಮಾತುಕತೆಯೂ ಆಗಿತ್ತು ಆದರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರು ಇದಕ್ಕೆ ಒಪ್ಪಿರಲಿಲ್ಲ. ಇದು ಅವರು ಪತ್ರ ಬರೆಯಲು ಕಾರಣವಾಗಿರಬಹುದು.

ಪತ್ರದಲ್ಲಿ ಎಲ್ಲಿಯೂ ಸಚಿವ ಪ್ರಿಯಾಂಕ ಖರ್ಗೆಯವರ ಹೆಸರಿಲ್ಲ ಆದರೂ ಬಿ ಆರ್ ಪಾಟೀಲರು ತಮ್ಮ ಮತ್ತು ಪ್ರಿಯಾಂಕ ಖರ್ಗೆ ಮಧ್ಯೆ ತಂದಿಡುವ ಸಲುವಾಗಿ ಪತ್ರ ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ ಇದು ಹೇಗಿದೆ ಎಂದರೆ ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಹಾಗಿದೆ ಎಂದು ತಿಳಿಸಿದ್ದಾರೆ.

ಬಿ ಆರ್ ಪಾಟೀಲರಿಗೆ ಚುನಾವಣೆ ಗೆಲ್ಲಲು ದಲಿತ ಮತಗಳು ಬೇಕು ಆದರೆ ದಲಿತ ಅಧಿಕಾರಿಗಳು ಇವರಿಗೆ ಬೇಡ ಎಂಬ ಮನಸ್ಥಿತಿಯುಳ್ಳವರಾಗಿದ್ದಾರೆ. ಪ್ರಚಾರದಲ್ಲಿ ಇರಲು ಈ ರೀತಿಯ ಕುತಂತ್ರಗಳು ಯಾವಾಗಲೂ ಅವರು ಮಾಡಿಕೊಂಡಿಯೇ ಬರುತ್ತಿದ್ದಾರೆ

ಈ ಹಿಂದೆ ಸಿದ್ಧರಾಮಯ್ಯನವರ ಜೊತೆಗಿದ್ದು ನಂತರ ಅವರಿಗೆ ಕೈ ಕೊಟ್ಟು ನಂತರ ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡು ಅವರ ಹೆಸರಿನಲ್ಲಿ ಚುನಾವಣೆ ಗೆದ್ದು ಮುಂದೆ ಅವರಿಗೂ ಕೂಡ ಕೈ ಕೊಟ್ಟು ಮತ್ತೆ ಸಿದ್ಧರಾಮಯ್ಯ ಗ್ಯಾಂಗ್ ಸೇರಿದ್ದು, ಈ ಸಲದ ಚುನಾವಣೆಯಲ್ಲಿ ಖರ್ಗೆಯವರ ಹೆಸರಿನಲ್ಲಿ ಚುನಾವಣೆ ಗೆದ್ದಿದ್ದು ಕ್ಷೇತ್ರದ ಜೊತೆಗೆ ರಾಜ್ಯದ ಜನತೆಗೂ ಗೊತ್ತಿರುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಪತ್ರದ ಸತ್ಯಾಸತ್ಯತೆ ಹೊರಗೆ ಬರಲು ಫೋರೇನ್ಸಿಕ್ ಲ್ಯಾಬ್‍ನಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here