ಜನತೆಗೆ ನ್ಯಾಯಯುತವಾದ ಸೇವೆ ಒದಗಿಸಿ: ಸಚಿವ ಕೆ.ಎನ್.ರಾಜಣ್ಣ

0
23

ಕಲಬುರಗಿ: ಸಹಕಾರ ಸಂಘಗಳ ಕಾಯ್ದೆ-1959 ಮತ್ತು ನಿಯಮಾವಳಿಗಳು-1960ನ್ನು ಸಹಕಾರ ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಜನತೆಗೆ ನ್ಯಾಯಯುತ ಸೇವೆ ಒದಗಿಸಬೇಕು ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಕಾರ ಇಲಾಖೆಯಿಂದ ಆಯೋಜಿಸಿದ ಪ್ರಾಂತೀಯ ಮಟ್ಟದ ಸಹಕಾರ ದಾವೆ ಮತ್ತು ಅಮಲ್ಜಾರಿ ಪ್ರಕರಣಗಳ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದ ಅವರು, ಪರಿಪೂರ್ಣ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂದು ಆಯೋಜಿಸಿರುವ ಕಾರ್ಯಾಗಾರ ಸಹಕಾರ ಅಧಿಕಾರಿಗಳಿಗೆ ಅನುಕೂಲಕರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಲಿಯುವುದಕ್ಕೆ ಅಂತ್ಯವಿಲ್ಲವೆಂದು ಭಾವಿಸಿದ್ದೇನೆ. ಕಲಿಕೆ ಒಂದು ನಿರಂತರ ಪ್ರಕಿಯೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಸದುಪಯಗೋಗ ಪಡಿಸಿಕೊಳ್ಳಬೇಕು. ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಕ್ರೂಢೀಕರಿಸಿ ನೀಡಲಾಗುವುದು. ಕಲಿಯುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಯಾವುದೇ ಅಂಜಿಕೆ-ಸಂಕೋಚವಿಲ್ಲದೆ ಇಲ್ಲಿ ಪ್ರಶ್ನೆ ಕೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ ಸಚಿವರು, ನಾನು ಈಗ ಮಂತ್ರಿಯಾಗಿರಬಹುದು. ಆದರೆ ನಾನು ಮೂಲತ: ‘ಸಹಕಾರಿ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದರು.

ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ರಾಜೇಂದ್ರ ಅವರು ಮಾತನಾಡಿ, ಕಲಬುರಗಿ ಸೇರಿ ಎರಡು ವಿಭಾಗಗಳಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಇನ್ನೆರಡು ವಿಭಾಗಗಳಲ್ಲಿ ಕಾರ್ಯಾಗಾರ ನಡೆಸಲಾಗುವುದೆಂದರು.

ಸಹಕಾರ ಸಂಘಗಳ ಅಪರ ನಿಬಂಧಕ (ಬಳಕೆ ಮತ್ತು ಮಾರಾಟ) ಪ್ರಕಾಶ ರಾವ್ ಅವರು ಕಾರ್ಯಾಗಾರದಲ್ಲಿ ವಾಜ್ಯಗಳ ನಿರ್ವಹಣೆಯಲ್ಲಿ ಮತ್ತು ಹಣ ದುರುಪಯೋಗ, ಸಾಲದ ವಸೂಲಾತಿಗಳ ನಿರ್ವಹಣೆಯಲ್ಲಿ ಅಧಿಕಾರಿ-ಸಿಬ್ಬಂದಿಗಳು ಪಾಲಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿತೆ ಮೂಲಕ ಸಮಗ್ರ ವಿವರಣೆ ನೀಡಿದ ಅವರು, ಅಧಿಕಾರಿಗಳು ಕಾರ್ಯಾಗಾರದಲ್ಲಿ ನೀಡುವ ಮಾಹಿತಿಯನ್ನು ಗಮನದಲ್ಲಿಟ್ಟಿಕೊಂಡು ನಿಯಮಗಳನ್ನು ಪಾಲಿಸಿ ವ್ಯಾಜ್ಯಗಳಿಗೆ ತೀರ್ಪು ನೀಡಬೇಕೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಅಪರ ನಿಬಂಧಕರುಗಳಾದ ಆಶಾ, ಬಾಲಶೇಖರ, ಲಿಂಗರಾಜು, ಜಂಟಿ ನಿಬಂಧಕರುಗಳಾದ ಮಹೇಶ, ಕಲ್ಲಪ್ಪ ಒಬಣಗೋಳ, ಜಯಪ್ರಕಾಶÀ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಡಿ.ನರಸಿಂಹಮೂರ್ತಿ, ಆಪ್ತ ಕಾರ್ಯದರ್ಶಿ ವೆಂಕಟೇಶ ಸೇರಿದಂತೆ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here