ಸುರಪುರ: ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ನಗರದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಪಾರಂಪರಿಕ ನಾಟಿ ವೈದ್ಯರಿಗೆ ಮೂರು ದಿನಗಳ ತರಬೇತಿ ಕಾರ್ಯಗಾರ ಆರಂಭಿಸಲಾಯಿತು.
ತರಬೇತಿ ಶಿಬಿರವನ್ನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಚಾಲನೆ ನೀಡಿ ಮಾತನಾಡಿದ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ನಾಟಿ ವೈದ್ಯ ಪದ್ಧತಿ ಔಷಧಿಗಳು ಸಾತ್ವಿಕ ಶಕ್ತಿ ಹೆಚ್ಚಿಸಿ ರೋಗಗಳನ್ನು ಕಡಿಮೆಗೊಳಿಸುತ್ತವೆ ಈ ಔಷಧಗಳಿಂದ ಅಡ್ಡ ಪರಿಣಾಮವಿಲ್ಲ ಎಂದರು.
ಈ ಪದ್ಧತಿ ಕುರಿತು ತರಬೇತಿ ಅಗತ್ಯ.ಪಾರಂಪರಿಕ ವೈದ್ಯ ಪದ್ಧತಿ ಇವತ್ತು ಕ್ಷೀಣಿಸುತ್ತಿದ್ದು ಅದನ್ನು ಮತ್ತೆ ಪುನರುಜ್ಜೀವನಗೊಳಿಸುವುದು ಅವಶ್ಯ ಇಂದಿನ ಆಧುನಿಕತೆಯ ಜೀವನ ನಡೆಸುತ್ತಿರುವ ನಮ್ಮ ಸಮಾಜಕ್ಕೆ ಪಾರಂಪರಿಕ ವೈದ್ಯ ಪದ್ಧತಿ ಔಷಧಗಳ ಅಗತ್ಯತೆ ಇದೆ ಈ ವೈದ್ಯ ಪದ್ಧತಿಯನ್ನು ವೈದ್ಯರು ಹಾಗೂ ಜನರು ಶ್ರದ್ಧೆಯಿಂದ ರಕ್ಷಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ನಿಷ್ಠಿ ಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿ ಪಾರಂಪರಿಕ ವೈದ್ಯ ಪದ್ಧತಿ ಎಂದೆಂದಿಗೂ ಜೀವಂತವಾಗಿರಲಿದೆ ಅನಾದಿ ಕಾಲದಿಂದಲೂ ಬೆಳೆದು ಬಂದಿರುವ ಈ ಪದ್ಧತಿ ಇಂದಿಗೂ ಜೀವಂತವಾಗಿದ್ದು ಈ ವೈದ್ಯ ಪದ್ಧತಿಗೆ ತನ್ನದೇ ಆದ ಶಕ್ತಿ ಇದ್ದು ಸರ್ವ ರೋಗಗಳಿಗೂ ಈ ಪದ್ಧತಿ ಉತ್ತಮವಾಗಿ ಕೆಲಸ ಮಾಡುತ್ತದೆ ಈ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಒತ್ತು ನೀಡುವುದು ಅವಶ್ಯ ನೇಪಥ್ಯಕ್ಕೆ ಸರಿಯುತ್ತಿರುವ ಈ ಪದ್ಧತಿಯ ಕುರಿತು ವಿಶೇಷವಾಗಿ ಇಂದಿನ ಯುವ ಜನಾಂಗದವರು ತಿಳಿದುಕೊಳ್ಳಬೇಕು ಈ ಪದ್ಧತಿಯನ್ನು ಪೋಷಿಸಿ ರಕ್ಷಿಸಬೇಕು ಎಂದು ಹೇಳಿದರು.
ಪರಿಷತ್‍ನ ರಾಜ್ಯಾಧ್ಯಕ್ಷ ಆನಂದ ಹೆರೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾರಂಪರಿ ವೈದ್ಯ ಪರಿಷತ್‍ನ ಬೆಳವಣಿಗೆ ಕುರಿತು ತಿಳಿಸುತ್ತಾ ಪಾರಂಪರಿ ವೈದ್ಯರನ್ನು ಸಂಘಟಿಸುವ ಕೆಲಸವನ್ನು ಪರಿಷತ್ ಮಾಡುತ್ತಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ಮಲ್ಲಿಕಾರ್ಜುನ ಮುತ್ಯಾ ನಾಡಿಶೋಧನೆ ಬಗ್ಗೆ ಉಪನ್ಯಾಸ ನೀಡಿದರು.
ಸುರಪುರ ಸಂಸ್ಥಾನದ ಅರಸು ವಂಶಸ್ಥರಾದ ರಾಜಾ ಲಕ್ಷ್ಮೀನಾರಾಯಣ ನಾಯಕ ಉದ್ಘಾಟಿಸಿದರು ಪ್ರಮುಖರಾದ ದೊಡ್ಡಪ್ಪ ನಿಷ್ಠಿ, ರಾಜಾ ಸುಭಾಶ್ಚಂದ್ರ ನಾಯಕ, ವೈದ್ಯರಾದ ಕುಮಾರಸ್ವಾಮಿ, ಮಕ್ತುಮ್ ಪಟೇಲ, ಪ್ರಭಯ್ಯಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಷತ್‍ನ ಖಜಾಂಚಿ ರಾಜಾ ಚನ್ನಪ್ಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಘವೇಂದ್ರ ಸುಗಂಧಿ ನಿರೂಪಿಸಿದರು. ವೆಂಕೋಬ ಕಟ್ಟಿಮನಿ,ತ್ರಿಶೂಲ್ ಹವಾಲ್ದಾರ,ಹಣಮಂತ ಪೂಜಾರಿ,ಮಾರುತಿ ಮಾಳನೂರು ಸೇರಿದಂತೆ ಯಾದಗಿರಿ ಜಿಲ್ಲೆಯ ಪಾರಂಪರಿ ನಾಟಿ ವೈದ್ಯರು ಪಾಲ್ಗೊಂಡಿದ್ದರು.