ಕಲಬುರಗಿ: ಗಂಜ್ ಪ್ರದೆಶದಲ್ಲಿರುವ ಶ್ರೀ ಸಂಗಯ್ಯಾ ಮುಕ್ಕಾ ಸಭಾಗೃಹದಲ್ಲಿ ಇನ್ನರ ವಿಲ್ ಕ್ಲಬ್ ಆಫ ಕಲಬುರಗಿ ಸನಸಿಟಿ, ಶ್ರೀ ನಗರೇಶ್ವರ ವೆಲ್‍ಫೇರ್ ಸೊಸೈಟಿ ಹಾಗೂ ಇನ್ನರವಿಲ್ ಕ್ಲಬ್‍ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹದಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಕುರಿತು ಕಾರ್ಯಕ್ರಮವನ್ನು ಉಪನ್ಯಾಸಕರಾದ ಡಾ. ರಾಜಶ್ರೀ ಪಾಲಾದಿ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಮುಖ್ಯವಾಗಿ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಕುರಿತು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶರಬಯ್ಯ ಗಾದಾ ಕನ್ಯಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀನಿವಾಸ ಎಂ ಅವರು ವಹಿಸಿದರು. ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ರವೀಂದ್ರ ಮುಕ್ಕಾ ಸರ್ ಅವರು ವಹಿಸಿದ್ದರು.
ಅತಿಥಿಯಾದ ಇನ್ನರವಿಲ್ ಕ್ಲಬ್, ಆಫ್ ಕಲಬುರಗಿ ಸನಸಿಟಿ ಅಧ್ಯಕ್ಷರಾದ ಪಲ್ಲವಿ ಮುಕ್ಕಾ, ಇನ್ನರವಿಲ್ ಕ್ಲಬ್ ಆಫ್ ಕಲಬುರಗಿ ಸನಸಿಟಿಯ ಕಾರ್ಯದರ್ಶಿಗಳಾದ ಪಲ್ಲವಿ ಕೊಠಾರಿ, ರೋಟರಿ ಸಹಾಯಕ ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಇನ್ನರ ವಿಲ್ ಕ್ಲಬ್‍ನ ಎಲ್ಲಾ ಸದಸ್ಯರು ಹಾಗೂ ಎಲ್ಲಾ ಪ್ರೌಢ ಶಾಲೆಯ ಸಹ ಶಿಕ್ಷಕರು ಇದ್ದರು. ಇದರಲ್ಲಿ 8 ನೇ, 9 ನೇ ಹಾಗೂ 10 ನೇ ತರಗತಿಯ ಒಟ್ಟು 300 ವಿದ್ಯಾರ್ಥಿನಿಯರು ಭಾಗವಹಿಸಿ ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡರು.