ಜಗತ್ತಿನ ಆರೋಗ್ಯ ಸಂಪತ್ತೇ ಬಹುದೊಡ್ಡದು

0
19

ಸೇಡಂ : ತಾಲ್ಲೂಕಿನ ಕೋಡ್ಲಾ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡ್ಲಾ ವತಿಯಿಂದ ಅರೋಗ್ಯ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು ಮಕ್ಕಳಿಗೆ ನಿಮ್ಮ ಅರೋಗ್ಯ ನೀವು ಕಾಪಾಡಿಕೊಳ್ಳಬೇಕು, ನಿಮ್ಮ ಅಂಗೈಯಲ್ಲಿ ನಿಮ್ಮ ಆರೋಗ್ಯವಿದೆ, ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಜಗತ್ತಿನ ಆರೋಗ್ಯ ಸಂಪತ್ತೇ ಬಹುದೊಡ್ಡದು ಎಂದು ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಂತೋಷ ಕುಡ್ಡಳ್ಳಿ ಸಲಹೆ ನೀಡಿದರು.

ವೇದಿಕೆ ಮೇಲೆ ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಮಾತನಾಡುತ್ತಾ ಮಕ್ಕಳ ಶಿಕ್ಷಣದ ಜೊತೆಯಲ್ಲೆ ಆರೋಗ್ಯ ರಕ್ಷಣೆ ಬಗ್ಗೆ ಬಹಳ ಕಾಳಜಿ ವಹಿಸುವುದು ಬಹಳ ಮುಖ್ಯ ವೈಯಕ್ತಿಕ ಸ್ವಚ್ಚತೆ ಹಾಗೆ ಸುತ್ತಮುತ್ತಲಿನ ವಾತಾವರಣ ಹದಗೇಡದಂತೆ ಮಕ್ಕಳು ಮನೆಯಲ್ಲಿ ಅಗಲಿ ಶಾಲೆಯಲ್ಲಿ ಅಗಲಿ ಸ್ವಚ್ಛಂದವಾಗಿ ಇಟ್ಟಿಕೊಳ್ಳಬೆಕು ಎಂದರು ಮತ್ತು ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸುವ ಜೊತೆಯಲ್ಲೆ ನನ್ನ ಆರೋಗ್ಯ ನನ್ನ ಸಂತೋಷ ನನ್ನ ವಯಕ್ತಿಕ ಜವಾಬ್ದಾರಿ ಎಂದು ಮಕ್ಕಳಿಗೆ ತಿಳಿಹೇಳಿದರು.

Contact Your\'s Advertisement; 9902492681

ಪ್ರಮುರಾದ ಕೋಡ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸ್ನೇಹ ಕರ್ಜೀಕರ್ , ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಳಾದ ಜ್ಯೋತಿ ಪಾಟೀಲ್, ನಿರ್ಮಲಾ ಗುತ್ತೆದಾರ, ನಾಗಮ್ಮ , ಹುಸೇನಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಇಬ್ರಾಹಿಂ ಗಾರಂಪಳ್ಳಿ, ಪ್ರಾಥಮಿಕ ಮಾದರಿ ಶಾಲೆಯ ಮುಖ್ಯ ಗುರುಗಳು ಮುಡಬಿ ಗುಂಡೆರಾವ ಪ್ರಾಸ್ತಾವಿಕ ನುಡಿ ಆಡಿದರು, ಸಹ ಶಿಕ್ಷಕರಾದ , ಶಿವಪತ್ರ , ಸವಿತಾ , ಮೊಗಲಮ್ಮ, ಅತಿಥಿ ಶಿಕ್ಷಕಿರಾದ ಪಾರ್ವತಿ, ರಂಜಿತಾ, ಪುಷ್ಪಲತಾ. ಹಾಗೆ ಎಸ್ ಡಿ ಎಂ ಸಿ. ಗುರುನಾಥ ಗುಂಡೆನೊರ್. ಶಾಲೆಯ ಮಕ್ಕಳು ಉಪಸ್ಥಿತರಿದ್ದರು, ಗುರುನಾಥ ವಿಶ್ವಕರ್ಮ ಸ್ವಾಗತಿಸಿದರು. ದೇವದಾಸ ರೆಡ್ಡಿ ನಿರೂಪಿಸಿದರು. ಕಾಳಮ್ಮ ಕಾಸರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here