ಸಹಕಾರ ಸಂಘ ಬಲಪಡಿಸವ ಜವಾಬ್ದಾರಿ ನಮ್ಮೆಲರ ಮೇಲಿದೆ: ನರೋಣಿ

0
57

ಶಹಾಬಾದ: ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮರತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ನರೋಣಿ ಹೇಳಿದರು.

ಅವರು ಮರತೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕಲಬುರಗಿ ಜಿಲ್ಲಾಸಹಕಾರ ಒಕ್ಕೂಟ, ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಸಹಕಾರ ಸಂಘಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುತ್ತವೆ. ನಿಸ್ವಾರ್ಥ ಸೇವಾ ಮನೋಭಾವ ಸಹಕಾರ ಸಂಘಗಳಲ್ಲಿ ಇರಬೇಕು.ಪರಸ್ಪರ ಸಹಕಾರ ಭಾವನೆಯಿಂದ ಸಹಕಾರ ಸಂಘಗಳು ನಡೆಯುತ್ತವೆ ಈ ದಿಸೆಯಲ್ಲಿ ಎಲ್ಲಾ ಜನಸಾಮಾನ್ಯರು ಸಹಕಾರ ಸಂಘಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ಮತ್ತು ಪ್ರೋತ್ಸಾಹ ಕೊಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೆಐಸಿಎಂ ಉಪನ್ಯಾಸಕಿ ಮಂಜುಳಾ ಬಿರಾದಾರ ಮಾತನಾಡಿ,ಸಹಕಾರ ಸಂಘ, ಸಂಸ್ಥೆಗಳು ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಹಲವು ರೈತರಿಗೆ, ಮಹಿಳೆಯರಿಗೆ ಸಹಕಾರಿಯಾಗಿವೆ. ಮಹಿಳಾ ಸಂಘ, ಸ್ತ್ರಿ ಶಕ್ತಿ ಸಂಘಗಳ ಮೂಲಕ ಮಹಿಳೆಯರು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರು ಈ ಸಹಕಾರಿ ಸಂಘಗಳ ಜತೆ ಭಾಗವಹಿಸಿ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಮರತೂರ ಗ್ರಾಮದ ವಿರಕ್ತ ಮಠದ ಶ್ರೀಶೈಲ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮರತೂರ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಮನೋಹರ್ ಉದ್ಘಾಟಿಸಿದರು.ಸೇಡಂ ಸಹಕಾರ ಸಂಘಗಳ ಸಹಾಯಕ ನಿಬಂಧಕ ರವಿಕುಮಾರ, ದೃಷ್ಠಿ ಕಣ್ಣಿನ ಆಸ್ಪತ್ರೆಯ ಪಿ.ಆರ್.ಓ ಸಿದ್ಧಾರೂಡ, ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಜಾ ಚವ್ಹಾಣ, ನಿರ್ದೇಶಕರಾದ ಸಿದ್ದಲಿಂಗ ಬಮ್ಮನಳ್ಳಿ, ಶಮಶೀರ ಗೋಳಾ,ಶಿವಾನಂದ ಮಸಗಲ, ಗುಂಡಪ್ಪಕುಂಬಾರ,ಶರಣಮ್ಮ ಮಾಲಿಪಾಟೀಲ,ಉಮಾಬಾಯಿ ಸಾಹೂ, ಕೃಷಿ ಸಹಕಾರ ಸಂಘದ ಸಿಇಓ ಈರಣ್ಣ ಬುಕ್ಕನ್, ಶರಣಬಸಪ್ಪ ಪಟೇದ್,ಶ್ಯಾಮರಾಯಗೌಡ ಪಾಟೀಲ, ರಮೇಶ ಸಾಹು, ನಾಗಣ್ಣ ಮೈನಾಳ,ಮಲ್ಲಣ್ಣ ಅಣಕಲ್,ರವಿ ಚನ್ನಮಗೋಳ, ದಿಲೀಪ ಗಿರಣಿ, ವಿನಾಯಕ ಜಟ್ಟೂರ್ ಇತರರು ಇದ್ದರು. ಮಲ್ಲಿಕಾರ್ಜುನ ದೊಡ್ಡಿ ನಿರೂಪಿಸಿದರು, ಶೈಲಜಾ ಚವ್ನಾಣ ಸ್ವಾಗತಿಸಿದರು, ಇಸ್ಮಾಯಿಲ್ ಬಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here