ಒಲಿದಂತೆ ಹಾಡಿದ ಮಕ್ಕಳು..!

0
78

ಕಲಬುರಗಿ: ಗ್ರಾಮೀಣ ಪ್ರದೇಶದ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ತಮ್ಮಲ್ಲಿನ ವಿವಿಧ ಪ್ರತಿಭೆಯನ್ನು ಹೊರಹಾಕಿದ ಅದ್ಭುತ ಕಾರ್ಯಕ್ರಮವೊಂದನ್ನು  ಹೊರವಲಯದ ಸಿರನೂರಿನ ಭಾರತೀಯ ವಿದ್ಯಾ ಮಂದಿರದಲ್ಲಿ ಜರುಗಿತು.

ಮಕ್ಕಳಿಗಾಗಿ ಆಯೋಜಿಸಿದ ‘ಮಕ್ಕಳ ಜಾನಪದ ವೈಭವ’ ಎನ್ನುವ ಒಲಿದಂತೆ ಹಾಡುವೆ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ಕೇವಲ ಮಕ್ಕಳ ಅಂಕ ನಿರೀಕ್ಷೆಯಲ್ಲಿರುವ ಪಾಲಕರು ಮಕ್ಕಳ ಬಾಯಿ ಬಿಡಿಸುವ ಕೆಲಸ ಮಾಡಬೇಕು ಎಂದರು. ಜನರ ಬಾಯಿಯಿಂದ ಬಾಯಿಗೆ ಹರಿದು ಬಂದಿರುವ ಜನಪದ ಸಾಹಿತ್ಯ ಎಲ್ಲ ಬಗೆಯ, ಎಲ್ಲ ವರ್ಗದ ತವನಿಧಿಯಂತಿದೆ. ಮಕ್ಕಳಿಗೆ ಜಾನಪದ ಕಥೆ, ಜಾನಪದ ಹಾಡುಗಳನ್ನು ಕೇಳಿಸುವುದರಿಂದ, ಹಾಡಿಸುವುದರಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳಲಿದೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಮುಗ್ಧ ಮನಸ್ಸಿನ ಮಕ್ಕಳ ಮನೋಭೂಮಿಕೆಯಲ್ಲಿ ಒಳ್ಳೆಯ ಅಭಿರುಚಿ ಬಿತ್ತುವ ಮೂಲಕ ಒಳ್ಳೆಯ ಬೆಳೆ ಪಡೆಯಬಹುದು. ಹೀಗಾಗಿ ಮಕ್ಕಳಿಗೆ ಎಲ್ಲ ಬಗೆಯ ಜ್ಞಾನವನ್ನು, ಶಿಕ್ಷಣವನ್ನು ಪಾಲಕರಾದವರು ಒದಗಿಸಬೇಕು ಎಂದು ಅವರು ವಿವರಿಸಿದರು. ಕಾರ್ಯಕ್ರಮದ ಆರಂಭಕ್ಕೆ ಮಾತುಗಳನ್ನಾಡಿದ  ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಕ್ಕಳಿಗೆ ಉತ್ತಮ ವೇದಿಕೆ ಒದಗಿಸುವ ಉದ್ಧೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿದ್ದು, ಮಕ್ಕಳು ಮತ್ತು ಪಾಲಕರು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥೆ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡಾ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾವಿದ ದತ್ತರಾಜ ಕಲಶೆಟ್ಟಿ, ಸಂಸ್ಥೆಯ ರಾಜಶೇಖರ ಗುಡ್ಡಾ, ಶಿಲ್ಪಾ ಗುಡ್ಡಾ, ರೇವತಿ ರಾಜಶೇಖರ ಗುಡ್ಡಾ, ಪ್ರತಿಷ್ಠಾನದ ಶ್ರೀಕಾಂತ ಪಾಟೀಲ ತಿಳಗೂಳ, ಎಸ್.ಎಂ.ಪಟ್ಟಣಕರ್, ವಿಶ್ವನಾಥ ತೊಟ್ನಳ್ಳಿ ಕುಸನೂರ, ಶಿಕ್ಷಕರಾದ ಸಿದ್ಧರಾಮ ಪಾಟೀಲ, ಶಿವರಾಜ ಹೋಸೂರೆ, ಶೋಭಾ ಹೆಚ್.ಡಿ. ಸೇರಿದಂತೆ  ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಕಲಾವಿದರು ಭಾಗವಹಿಸಿದ್ದರು…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here