ವಸತಿ ನಿಲಯ ಖಾಸಗಿ ಕಟ್ಟಡದ ಲಾಬಿ ಕೈ ಬಿಟ್ಟು, ಸರಕಾರಿ ವಸತಿ ನಿಲಯಕ್ಕೆ ಒತ್ತಾಯಿಸಿ ಹೈ.ಕ ವಿದ್ಯಾರ್ಥಿ ಒಕ್ಕೂಟ ಆಗ್ರಹ

0
89

ರಾಯಚೂರು/ಮಾನವಿ: ಖಾಸಗಿ ವಸತಿ ನಿಲಯ ಮುಚ್ಚಿ ಸರಕಾರಿ ವಸತಿ ನಿಲಯ ಸ್ಥಾಪಿಸಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿ ಹೈದಾರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದಿಂದ ಕಪ್ಪು ಬಟ್ಟೆ ಧರಿಸಿ ಸಚಿವ ಶ್ರೀರಾಮಲು ಅವರಿಗೆ ಒತ್ತಾಯಿಸಲಾಯಿತು.

ರಾಜ್ಯದಲ್ಲಿ ಬಹುತೇಕ ವಸತಿ ನಿಲಯಗಳು ಖಾಸಗಿ ಕಟ್ಟದಲ್ಲಿಯೇ ಇದ್ದು, ಖಾಸಗಿ ವಸತಿ ನಿಲಯಗಳಲ್ಲಿ ಮೂಲ ಭೂತ ಸೌಕರ್ಯಗಳು ಕುಟು ಹಾಸ್ಟಲ್ ವಿದ್ಯಾರ್ಥಿಗಳಿಗೆ ಇಲ್ಲ ಎಂದು ಪ್ರತಿಭಟನೆಯ ನೇತೃತ್ವವಹಿಸಿದ ನ್ಯಾಯವಾದಿ ಮಲ್ಲೇಶ್ ಅವರು ಆರೋಪಿಸಿದರು.

Contact Your\'s Advertisement; 9902492681

ರಾಜ್ಯದಲ್ಲಿ ಕೊಪ್ಪಳದಲ್ಲಿ ಧ್ವಜ ಕಂಬವನ್ನು ತೆಗೆಯಲು ಹೋಗಿ ಐವರು ಗ್ರಾಮೀಣ ವಿದ್ಯಾರ್ಥಿಗಳ ಬಲಿ ಪಡೆದಿದ್ದು ರಾಜ್ಯ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟ ಎಂದು ತಿಳಿಸಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿಗಳು ಪರಿಹಾರ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here