ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಅಸೋಸಿಯೇಷನ್ ವಿವಿಧ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ

0
108

ಕಲಬುರಗಿ: ಬಳ್ಳಾರಿ ವಿಭಾಗ, ಕಲಬುರಗಿ ವಿಭಾಗ-1 ಮತ್ತು ವಿಭಾಗ-2 ಕೇಂದ್ರ ಸಮಿತಿಯ ಅದಿನದ ಸ್ಟೆ ಯುವನಿಯನ್ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಅಸೋಸಿಯೇಷನ್ ವಲಯದ ಅಧ್ಯಕ್ಷರಾದ ಚಂದ್ರಕಾಂತ ಗದ್ದಗಿ ರವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಅಸೋಸಿಯೇಷನ್ ಮಹಾಸಭೆ ನಡೆಸಿ ಈ ಸಭೆಯಲ್ಲಿ ವಿಭಾಗ-1 ಮತ್ತು ವಿಭಾಗ-2 ಬಳ್ಳಾರಿ ವಿಭಾಗ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಿಭಾಗ-1ರ (ವಿಠಲ ಎನ್.ಭೀಮನ ಅಧ್ಯಕ್ಷ), (ಶಿವಕುಮಾರ ಗೋಳಾ ಗೌರವಾಧ್ಯಕ್ಷ), (ಸಂತೋಷ ವಾಲಿ ಕಾರ್ಯಾಧ್ಯಕ್ಷ) (ದೇವಿಂದ್ರ ಭೇಹರೆ ಪ್ರಧಾನ ಕಾರ್ಯದರ್ಶಿ), (ವೀರಭದ್ರಪ್ಪ ಆರಕೇರಿ ಮುಖ್ಯ ಉಪಾಧ್ಯಕ್ಷ) ಇವರನ್ನು ಆಯ್ಕೆ ಮಾಡಲಾಯಿತು.
ವಿಭಾಗ-2ರ (ಶಿವಶರಣಪ್ಪ ಡಬರಾಬಾದಿ ಅಧ್ಯಕ್ಷ), (ಧೂಳಪ್ಪ ಬಬಲಾದ ಗೌರವಾಧ್ಯಕ್ಷ), (ಗುಂಡಪ್ಪ ರೋಷನ ಕಾರ್ಯಾಧ್ಯಕ್ಷ), (ಅಜಯ್ ಬಿ.ಕಪನೂರ ಪ್ರಧಾನ ಕಾರ್ಯದರ್ಶಿ), (ರೇಷ್ಮಾ ದಣ್ಣೂರ ಮಹಿಳಾ ಅಧ್ಯಕ್ಷೆ), (ಆನಂದ ಬಬಲಾದ ಮುಖ್ಯ ಉಪಾಧ್ಯಕ್ಷ), ಇವರನ್ನು ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಬಳ್ಳಾರಿ ವಿಭಾಗದ (ವಿ. ಈರಸ್ವಾಮಿ ಅಧ್ಯಕ್ಷ), (ಮುಂಡರಗಿ ನಾಗರಾಜ ಗೌರವಾಧ್ಯಕ್ಷ), (ಬಿ. ವೆಂಕಟೇಶಲು ಕಾರ್ಯಾಧ್ಯಕ್ಷ), (ಬಿ. ಭಾಸ್ಕರ ಪ್ರಧಾನ ಕಾರ್ಯದರ್ಶಿ), (ಹೆಚ್. ಶ್ರೀನಿವಾಸ ಮುಖ್ಯ ಉಪಾಧ್ಯಕ್ಷ), (ಕೆ.ಹೆಚ್ ಪ್ರಭಾಕರ ಖಜಾಂಚಿ), (ಬಿ, ರುದ್ರಮುನಿ, ಕೃಷ್ಣನಾಯ್ಕ ಜಂಟಿ ಕಾರ್ಯದರ್ಶಿಗಳು), (ಕಮಲಾ ಮಹಿಳಾ ಅಧ್ಯಕ್ಷೆ), (ಡಿ.ಶಶಿಕಲಾ ಪ್ರಧಾನ ಕಾರ್ಯದರ್ಶಿ) ಇವರನ್ನು ಆಯ್ಕೆ ಮಾಡಲಾಯಿತು.

ನಂತರ ಚಂದ್ರಕಾಂತ ಗದ್ದಗಿ ಅವರು ಮಾತನಾಡುತ್ತಾ ಸಂಘದ ಒಗ್ಗಟ್ಟು ಮತ್ತು ಬಸವ ತತ್ವ ಹಾಗೂ ಬಾಬಾ ಸಾಹೇಬ ಅಂಬೇಡ್ಕರ ರವರ ಆದರ್ಶದಡಿಯಲ್ಲಿ ಸಂಘಟನೆ ಕೊಂಡೊಯುವುದು ಮಹತ್ವದಾಗಿರುತ್ತದೆ, ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ ರವರ ಮೂಲ ಮಂತ್ರವನ್ನು ನಮ್ಮ ಕಾರ್ಯ ವೈಖರಿಯಲ್ಲಿ ಅನುಸರಿಸಿ ಸಂಸ್ಥೆಗೆ ಹಾಗೂ ಸಂಘಕ್ಕೆ ಸಮರ್ಥವಾದ ಮನೋಭಾವನೆಯಿಂದ ಪದಾಧಿಕಾರಿಗಳು ಕಾರ್ಮಿಕರ ಸೇವೆಯಲ್ಲಿ ತೊಡಗಿಸಿಕೊಂಡು ಸಂಸ್ಥೆ ಮತ್ತು ಕಾರ್ಮಿಕರ ಹಿತಕಾಪಾಡಲು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಮಾರಂಭದಲ್ಲಿ ವಲಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಬಿ.ಹೈಯಾಳಕ, ಸ್ಟೆ ಯುವನಿಯನ್ ಮಹಾಮಂಡಳ ಗೌರವಾಧ್ಯಕ್ಷ ಭೀಮರಾವ ಯರಗೋಳ, ಬಸವರಾಜ ಜಾನಕಟ್ಟಿ, ಸಿದ್ರಾಮ ಕಲಶೆಟ್ಟಿ, ಕೆ. ಮಲ್ಲಿಕಾರ್ಜುನ, ಚಂದ್ರಕಾಂತ ಡೊಳ್ಳಿ, ಭರತ ಶ್ರೀಂಗೇರಿ ಅಧ್ಯಕ್ಷರು, ಸೂರ್ಯಕಾಂತ ಸಿಂಗೆ, ಸಂಗನಬಸಪ್ಪ ಅಂಗಡಿ, ಶ್ರೀಮಂತ ಜಮಾದಾರ, ಮುದ್ದುಕೃಷ್ಣ ರಾಯಚೂರು ವಿಭಾಗ, ಶಿವಕುಮಾರ ಗಾಯಕವಾಡ ಬೀದರ ವಿಭಾಗ, ರಾಚಪ್ಪ ಲಿಂಗದಳ್ಳಿ ವಿಜಯಪುರ ವಿಭಾಗ, ಗುನ್ನಾಪೂರ ಇದ್ದರು. ವಿಠಲ ಭೀಮನ್ ಸ್ವಾಗತ ಕೋರಿದರು. ನಿರೂಪಣೆ ದೇವಿಂದ್ರ ಬೇಹರೆ ನಡೆಸಿಕೊಟ್ಟರು, ಪ್ರಾಸ್ತಾವಿಕವಾಗಿ ವಲಯದ ಪ್ರಧಾನ. ಕಾರ್ಯದರ್ಶಿಯಾದ ರಾಮಚಂದ್ರ ಹೈಯಾಳಕರ್ ಅಸೋಸಿಯೇಷನ್ ದೈಯೊದ್ದೇಶ ಹಾಗೂ ಸಂಘ ಕಾರ್ಮಿಕ ಪರವಾಗಿ ಮಾಡಿದ ಕಾಯಗಳನ್ನು ವಿವರಣೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here