ಸೇಡಂ: ಪಟ್ಟಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಬಡ ರೋಗಿಗಳಿಗೆ ಜಮೀಯತ್ ಉಲಮಾ ಹಿಂದ್ ಸೇಡಂ (Jamiat ulama hind)ಸಂಘನೆಯಿದಿಂದ ಹಣ್ಣು ಹಂಪಲು ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಮೀಯತ್ ಉಲಮಾ ಹಿಂದ್ ಕಾರ್ಯದರ್ಶಿ ಮೌಲಾನಾ ಜಾವೇದ್ ಸಾಬ್ ಇಶಾತಿ ಅವರು ಮಾತನಾಡಿ ಇಂದು ನಮ್ಮ ಭಾರತವು 77ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ಈ ಮಹತ್ವದ ದಿನವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ಅನೇಕ ವರ್ಷಗಳ ಬ್ರಿಟೀಷ್ ವಸಾಹತು ಆಳ್ವಿಕೆಯಿಂದ ಮುಕ್ತಗೊಳಿಸಲು ಎಲ್ಲಾ ಜಾತಿಯ ಗಣ್ಯರ ತ್ಯಾಗ ಬಲಿದಾನ ಮಾಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತದೆ. ಮಹಾನ್ ಹೋರಾಟಗಾರರ ಹೋರಾಟದ ಫಲವಾಗಿ ನಾವಿಂದು ಮುಕ್ತವಾಗಿ ಜಾತ್ಯತೀತ ವಾಗಿ, ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಈ ವೇಳೆಯಲ್ಲಿ ಮೌಲಾನ ಯಾಸಿನ್ ಖಾನ್ ಸಾಬ್, ಮೌಲಾನಾ ಜಾವೀದ್ ಇಶಾತಿ, ಮೌಲಾನ ಮುಪ್ತಿ ಅಬ್ದುಲ್ ಖದಿರ್, ಮೌಲಾನಾ ಮುಜೀಬ್ ಊಡಗಿ, ಮೌಲಾನಾ ಖಾಸಿಂ ಊಡಗಿ, ಮೌಲಾನಾ ಇಸೂಬ್ ಖುರೇಷಿ, ಮೌಲಾನ ಇಮಾಮೋದಿನ್, ಮೌಲಾನಾ ಬಬಲು, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಅಧ್ಯಕ್ಷ ಮಹ್ಮದ್ ಗೌಸ್, ಮಹ್ಮದ್ ಕಾಶೀಪ್, ಅಲ್ಲಾಭಕ್ಷ ಪಟೇಲ್ ಬೀರನಹಳ್ಳಿ, ಖಬ್ಲಾ ಪಟೇಲ್ ಬೀರನಹಳ್ಳಿ,ಬಸವರಾಜ ಹೂಗಾರ, ಪಾರುಕ ಜಮಾದಾರ ಇತರರು ಇದ್ದರು.