ವಾಡಿ: ವ್ಯಾಪಾರ ಮಾಡುವುದಕ್ಕಾಗಿ ತಕ್ಕಡಿ ಹಿಡಿದು ಭಾರತಕ್ಕೆ ಬಂದ ಬ್ರಿಟೀಷರು ಇಲ್ಲಿಯ ಸಂಪತ್ತು ನೋಡಿ ದೇಶ ಕೊಳ್ಳೆ ಹೊಡೆಯುವ ಉದ್ದೇಶದಿಂದ ನಮ್ಮ ದೇಶದ ರಾಜ್ಯ ರಾಜ್ಯರ ಮದ್ಯೆ ವೈರತ್ವ ಬೇಳಿಸಿ ಕುತಂತ್ರ ದಿಂದ ಭಾರತ ದೇಶದ ಮೇಲೆ ಹಿಡಿತ ಸಾಧಿಸಿ ನಮ್ಮನ್ನು ಗುಲಾಮರನ್ನಾಗಿ ಮಾಡಿ ಆಳ್ವಿಕೆ ಮಾಡಿದರು, ಅವರ ಕೈಯಿಂದ ದೇಶ ಮುಕ್ತಿಗೋಳಿಸಲು ನಿರಂತರ ಸಂಘರ್ಷ ಮಾಡಬೇಕಾಯಿತು. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಅನೇಕ ಭಾರತಾಂಬೆಯ ವೀರ ಪುತ್ರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಆ ಸ್ವಾತಂತ್ರ್ಯ ಸೇನಾನಿಗಳ ಬದುಕು, ಅವರ ದೇಶ ಭಕ್ತಿ ನಮಗೆಲ್ಲ ಆದರ್ಶವಾಗಬೇಕು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಅನಿಲಕುಮಾರ ದೊಡ್ಡಮ್ಮನಿ ತಿಳಿಸಿದರು.
ಮಂಗಳವಾರ ಪಟ್ಪಣದ ಆಮೃತ ಜ್ಞಾನ ಶಿಕ್ಷಣ ಸಂಸ್ಥೆಯ ಡಾ. ಬಾಬಾಸಾಹೇಬ ಅಂಬೇಡ್ಕರ ಪ್ರೌಢಶಾಲೆ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಟೋಪಣ್ಣ ಕೋಮಟೆ ಅವರು ಧ್ವಜಾರೋಹಣ ನೆರವೇರಿಸಿದರು. ಹಿರಿಯ ಮುಖಂಡರಾದ ಖಂಡೆರಾವ ಸೂರ್ಯವಂಶಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಗಳನ್ನು ಅರ್ಪಿಸಿ ಗೌರವ ನಮನ ಸಲ್ಲಿಸಿದರು ಪತ್ರಕರ್ತ ದಯಾನಂದ ಖಜೂರಿ ಮಾತನಾಡಿದರು. ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು.
2022-23ನೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ, ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನಿಸಲಾಯಿತು ನಂತರ ಮಕ್ಕಳಿಂದ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಮೃತ ಕೋಮಟೆ, ಶಿಕ್ಷಕರಾದ ಬುದ್ಧಪ್ರೀಯ ಕೋಮಟೆ, ಅಪ್ಪರಾವ ಬಿಲಗುಂದಿ, ಬಸವರಾಜ ಘುಳೆ, ಸುನಿಲ ಹಳಿಪೇಟ, ಸುನಿತಾ ಖಜೂರಿ, ಅರುಣಕುಮಾರ ಹುಗ್ಗಿ, ಶಕುಂತಲಾ ಕೋಮಟೆ, ಲಕ್ಷ್ಮೀಕಾಂತ ಕೋಬಾಳ, ಸುರೇಶ ಕುಂಬಾರ, ದಶರಥ ಗಾಯ್ಕವಾಡ, ರೇಖಾ ಸಾಲಿಮಠ, ಸುವರ್ಣ, ಗಾಯತ್ರಿ ಪಂಚಾಳ, ಶಾಂತಕುಮಾರಿ ಬರ್ಮಾ, ಭೋಜು ದೊಡ್ಡಮ್ಮನಿ, ಪ್ರತಿಕ್ ಗಾಯ್ಕವಾಡ ಸೇರಿದಂತೆ ಹಲವರು ಇದ್ದರು.