ತಾಳೆ‌ಬೆಳೆ‌ ಪ್ರದೇಶ ವಿಸ್ತರಣೆ, ಜಿಲ್ಲಾ ಉಸ್ತುವಾರಿ ಸಚಿವರಿಂದ ಐವರಿಗೆ ಕಾರ್ಯಾದೇಶ

0
35

ಕಲಬುರಗಿ;  ಖಾದ್ಯ ತೈಲದ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ‌ತಾಳೆಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮಡಿ ಮಂಗಳವಾರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿನ ಜರುಗಿದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು 5 ಜನ ರೈತರಿಗೆ ಕಾರ್ಯದೇಶ ಹಾಗೂ ತಾಳೆಬೆಳೆ ಸಸಿಗಳನ್ನು ವಿತರಿಸಿದರು.

ಜಿಲ್ಲೆಯ ರಾವೂರ ಗ್ರಾಮದ ಚಂದ್ರಕಾಂತ ತಂದೆ ಸಿದ್ಧರಾಮ, ನಂದೂರು (ಬಿ) ಗ್ರಾಮದ ಪ್ರಿಯಾ ಗಂಡ ಮೋಹನ, ಗೊಬ್ಬೂರು‌(ಬಿ) ಗ್ರಾಮದ ಪ್ರಶಾಂತ ತಂದೆ ಶಿವಾನಂದ, ತೇಗಲತಿಪ್ಪ ಗ್ರಾಮದ ಪ್ರಕಾಶ ತಂದೆ ನಾಗೇಂದ್ರ ಹಾಗೂ ಇರಗಪಲ್ಲಿ ಗ್ರಾಮದ ಚಿಂತಪಲ್ಲಿ ವೆಂಕಟ ಸೂರ್ಯ ಕಾರ್ಯದೇಶ ಪಡೆದುಕೊಂಡ ಫಲಾನುಭವಿಗಳಾಗಿದ್ದಾರೆ.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯಲ್ಲಿ 120 ಹೆಕ್ಟ‌ರ್ ಪ್ರದೇಶದಲ್ಲಿ ತಾಳೆಬೆಳೆ ಇದ್ದು, ಇನ್ನು ಹೆಚ್ಚಿನ ಪ್ರದೇಶ ವಿಸ್ತರಣೆ ಕೈಗೊಳ್ಳಲು ವಿಫುಲ ಅವಕಾಶಗಳಿರುವುದರಿಂದ 2023-24 ನೇ ಸಾಲಿನಲ್ಲಿ ಒಟ್ಟು 150 ಹೆಕ್ಟರ್ ಪ್ರದೇಶದಲ್ಲಿ ಪ್ರದೇಶ ವಿಸ್ತರಣೆಯನ್ನು ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ 1 ಹೆಕ್ಟರ್ ಪ್ರದೇಶ ವಿಸ್ತರಣೆ ಕೈಗೊಳ್ಳಲು 29,000 ರೂ. ಸಹಾಯಧನ ಲಭ್ಯವಿದ್ದು, ಮೊದಲ 4 ವರ್ಷಗಳ ಬೆಳೆ ನಿರ್ವಹಣೆಗೆ 5,250 ರೂ. ಸಹಾಯಧನ ರೂಪದಲ್ಲಿ ನೀಡಲಾಗುತ್ತದೆ. ಅಲ್ಲದೆ ಈಗಾಗಲೇ ಪ್ರದೇಶ ವಿಸ್ತರಣೆ ಕೈಗೊಂಡ ರೈತರಿಗೆ ಅಂತರ ಬೆಳೆ ಬೇಸಾಯ ಹನಿ ನೀರಾವರಿ, ಕೊಳವೆ ಬಾವಿ, ಎರೆಹುಳು ಘಟಕ, ಡೀಸೆಲ್ ಪಂಪ ಸೆಟ್, ತಾಳೆ ಹಣ್ಣು ಕಟಾವು ಮಾಡುವ ಉಪಕರಣ, ಚಾಪ್ ಕಟ್, ನೀರು, ಕೋಯ್ಲು ಘಟಕ ಇತ್ಯಾದಿ ಘಟಕಗಳಿಗೂ ಶೇ.50 ರಂತ ಸಹಾಯಧನ ಒದಗಿಸಲಾಗುತ್ತಿದೆ.

ಈ‌‌ ಸಂದರ್ಭದಲ್ಲಿ ಶಾಸಕರಾದ‌ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ‌ ತಿಪ್ಪಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ ಹುಮನಾಬಾದ, ಶಶೀಲ ಜಿ.ನಮೋಶಿ, ಸುನೀಲ್ ವಲ್ಯಾಪುರೆ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಂದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here