ಕಲಬುರಗಿ; ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಿರುವ ವಿದ್ಯಾನಗರ ಕಾಲೋನಿಯ ಉದ್ಯಾನವನದಲ್ಲಿರುವ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಆಗಸ್ಟ 17 ಗುರುವಾರ ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯರ ಪುರಾಣ ಪ್ರವಚನ ಜರುಗಲಿದೆ, ಕಾರಣ ಸಕಲ ಸದ್ಭಕ್ತರು ಪ್ರತಿನಿತ್ಯ ಸಾಯಂಕಾಲ 6:30ಕ್ಕೆ ಆಗಮಿಸಿ ಪುರಾಣ ಕೇಳಿ ಪುನಿತರಾಗಬೇಕೆಂದು ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ತಾವರಗೇರಾ ಸುಕ್ಷೇತ್ರ ಮಠದ ಶ್ರೀ ಶ್ರೀ ಶ್ರೀ ಸಿದ್ಧಾರೂಡ ಮಹಾಸ್ವಾಮಿಗಳು ಪುರಾಣ ಪ್ರವಚನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶರಣಪ್ರಕಾಶ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷರಾದ ಚಂದ್ರಶೇಖರ ತಿಗಡಿ ಹಾಗು ಮಹಾನಗರಪಾಲಿಕೆಯ ವಾರ್ಡ ನಂ. 45ರ ಸದಸ್ಯರಾದ ಯಂಕಮ್ಮ ಜಗದೇವ ಗುತ್ತೇದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ.
ಚಿಂಚೋಳಿ ತಾಲೂಕಿನ ಐನಾಪೂರ ಶ್ರೀ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿಗಳು ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ. ಭೂಸನೂರಿನ ಗುರುಶಾಂತಯ್ಯ ಸ್ಥಾವರಮಠ ಗವಾಯಿಗಳು ಸಂಗೀತ ಹಾಗು ಭೂಸನೂರಿನ ವೀರಭದ್ರಯ್ಯ ಸ್ಥಾವರಮಠ ತಬಲಾ ಸೇವೆ ಮಾಡಲಿದ್ದಾರೆ. ಉಪಾಧ್ಯಕ್ಷರಾದ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿಗಳಾದ ಗುರುಲಿಂಗಯ್ಯ ಮಠಪತಿ ಹಾಗೂ ವಿದ್ಯಾನಗರ ವೆಲ್‍ಫೇರ ಸೊಸೈಟಿಯ, ಮಲ್ಲಿಕಾರ್ಜುನ ತರುಣ ಸಂಘದ ಹಾಗು ಅಕ್ಕಮಹಾದೇವಿ ಮಹಿಳಾ ಟ್ರಸ್ಟನ ಪದಾಧಿಕಾರಿಗಳು ಉಪಸ್ಥಿತರಿರುವರು.