ಕಲಬುರಗಿ: ಜನ್ಮ ನೀಡಿದ ತಂದೆ ತಾಯಿಯವರ ಸೇವೆಯನ್ನು ಯಾರು ಮಾಡುತ್ತಾರೆ ಅವರು ಸನ್ಮಾನ ಪ್ರತಿಭಾ ಪುರಸ್ಕಾರ ಆಗುತ್ತಾರೆ ಎಂದು ಶ್ರೀ ಪರಮ ಪೂಜ್ಯ ಜೇಮಸಿಂಗ ಮಹಾರಾಜರು ಹೇಳಿದರು.
ನಗರದ ಬಂಜಾರ ಭವನದಲ್ಲಿ ಬಂಜಾರ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘದ (ರಿ.) ಎಲ್ಲ ಪದಾಧಿಕಾರಿಗಳಿಗೆ ತಿಳಿಸುವುದೇನೆಂದರೆ.
ಪ್ರತಿ ವರ್ಷದಂತೆ 2022-23ನೇ ಸಾಲಿನಲ್ಲಿಯೂ ಎಸ್. ಎಸ್.ಎಲ್ .ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡ 80 ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಹಾಗೂ ಸ್ನಾತಕ ಪೂರ್ವ ವಿದ್ಯಾರ್ಥಿಗಳುಪದವಿ ಪೂರ್ವ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವೀಧರರು ಶೇಕಡ 70ರ ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ”ಪ್ರತಿಭಾ ಪುರಸ್ಕಾರ” ನೀಡಿ ಪೆÇ್ರೀತ್ಸಾಹಿಸಿ, ಪುರಸ್ಕರಿಸಲಾಗುವುದು. ಬಂಜಾರ ಸಮಾಜದ ಹೆಸರು ಮುಂದೆ ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಹೇಳಿದರು.
ಈಗಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದುಕೊಂಡು ಅಧಿಕಾರಿಗಳು ಆಗಿದ ಮೇಲೆ ಜನ್ಮ ನೀಡಿದ ತಂದೆ ತಾಯಿಯನ್ನು ಮರೆಯುತ್ತಾರೆ ಅವರ ಕಡೆ ನೋಡುತ್ತಿಲ್ಲ ಎಂದು ಹೇಳಿದರು. ತಂದೆ ತಾಯಿಯರು ತಮ್ಮ ಮಕ್ಕಳಿಗೆ ತಾವು ಉತ್ತಮ ಶಿಕ್ಷಣವನ್ನು ನೀಡುತ್ತೀರಿ ಎಂದು ನಾನು ಅಂದುಕೊಂಡಿದ್ದೇನೆ ಎಂದು ತಂದೆ ತಾಯಿಗೆ ಹೇಳಿದರು.
ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಮಾತನಾಡಿ ನಾವು ಸಮಾಜದಲ್ಲಿ ಜನ್ಮ ಪಡೆಯುವುದು ಮಾತ್ರ ಸಮಿತವಲ್ಲ ಉಪಯೋಗ ಪಡೆಯುವುದು ಅಷ್ಟೇ ಇಲ್ಲ ವಿದ್ಯಾಭ್ಯಾಸ ಮಾಡಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಪಡೆಯಬೇಕು ನಿಮ್ಮನ್ನು ನೋಡಿ ಈಗ ವಿದ್ಯಾಭಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತೆ ಮುಂದೆ ಬರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕ ಪಡೆದು ಪುರಸ್ಕಾರ ಮತ್ತು ಸನ್ಮಾನ ಪಡೆಯಬೇಕೆಂಬ ಹೆಂಬಲ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಂಪಿಟೇಶನ್ ಯುಗ, ಕಂಪ್ಯೂಟರ್ ಯುಗ ಮುಂದುವರೆದ ಯುಗ ಇದಕ್ಕೆ ಶಿಕ್ಷಣ ಅತಿ ಅವಶ್ಯಕವಾಗಿ ಬೇಕಾಗಿದೆ ಎಂದು ನುಡಿದರು. ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೆ ಹೈದರಾಬಾದ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುದ್ದೆ ಪಡೆಯುವ ಅವಕಾಶ ಇದೆ ಎಂದು ಹೇಳಿದರು.
ಕಾಯಕವೇ ಕೈಲಾಸ್ ಎಂದು 12ನೇ ಶತಮಾನದಲ್ಲಿ ಬಸವಣ್ಣ ಅವರು ಹೇಳಿದರು ಅದು ಚಾಚು ತಪ್ಪದೇ ಕಾಯಕವೇ ಕೈಲಾಸ ನೋಡಿದಾಗ ಅದು ಬಂಜಾರ ಸಮಾಜದಲ್ಲಿ ಇದೆ ಎಂದು ಕಂಡುಬರುತ್ತದೆ ಎಂದು ತಿಳಿಸಿದರು.
ಶಾಸಕ ಬಸವರಾಜ ಮತ್ತಿಮೂಡ್ ಅವರು ಮಾತನಾಡಿ ಬಂಜಾರ ಸಮಾಜದವರು ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದವರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಗುರಿ ಸಾಧಿಸಲು ದೃಢವಾದ ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಬಂಜಾರರು ಸ್ವಾಭಿಮಾನಿಗಳು ಸಮಾಜದ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ತಲುಪಬೇಕಾದರೆ ಓದುವ ಛಲ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಾಧಿಸಲು ಛಲವಿರಬೇಕು. ಸಾಮಾಜಿಕ ಕಳಕಳಿ ಇಟ್ಟುಕೊಳ್ಳಬೇಕು. ಯಾವುದೇ ಹುದ್ದೆಗೇರಿದರೂ ಆದರ್ಶ ನಾಗರಿಕರಾಗಿರಬೇಕು ಎಂದು ಹೇಳಿದರು.
ಬಂಜಾರ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘ ಅಧ್ಯಕ್ಷರಾದ ಸುನೀಲ ಕುಮಾರ ಜಿ ಚವ್ಹಾಣ ಅವರು ಪ್ರಸ್ತಾವಕ ನುಡಿಯನ್ನು ನೋಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ವಿವಿಧ ಪದವಿ ಎಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ 300 ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಭೇಡಸೂರ ಸೊನ್ಯಾಲಗಿರಿ ಶ್ರೀ ಪರಮ ಪೂಜ್ಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಗೋಬ್ಬುರವಾಡಿ ಸದ್ಗುರು ಸೇವಾಲಾಲ ಬಂಜಾರ ಶಕ್ತಿ ಪೀಠ ಶ್ರೀ ಪರಮ ಪೂಜ್ಯ ಬಳಿರಾಮ ಮಹಾರಾಜ, ಶ್ರೀ ಪರಮ ಪೂಜ್ಯ ಮುರಹರಿ ಮಹಾರಾಜ, ಬಂಜಾರ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಸತೀಶ ರಾಮಚಂದ್ರ ಚವ್ಹಾಣ, ಮಾ. ನ. ಪಾ. ಕಲಬುರಗಿ ಉಪ ಆಯುಕ್ತರಾದ ಪ್ರಕಾಶ ರಜಪೂತ, ಮಹಾನಗರ ಪಾಲಿಕೆ ಸದಸ್ಯರಾದ ಕೃಷ್ಣಾ ನಾಯಕ, ಮಾಜಿ ವಿರೋಧ ಪಕ್ಷ ನಾಯಕರಾದ ವಿಠ್ಠಲ ಜಾಧವ, ನಿವೃತ ಬಂಜಾರ ನೌಕರರ ಸಂಘದ ಅಧ್ಯಕ್ಷರಾದ ಬಿ ಬಿ ನಾಯಕ, ಪ್ರೇಮಸಿಂಗ ಚವ್ಹಾಣ, ಹರಿಶ್ಚಂದ್ರ ಎಸ್ ರಾಠೋಡ, ಶಿವರಾಮ ಡಿ ರಾಠೋಡ, ಪ್ರಭು ಜಿ ಜಾಧವ, ರವಿ ನಾಯಕ ಆಡೆ, ಬಾಬು ಎಂ. ಜಾಧವ, ರಾಜಶೇಖರ್ ಕೆ ಪವಾರ, ವಿನೋದ ರಾಠೋಡ, ರವಿ ಜಿ ನಾಯಕ, ಡಾ. ಗೋಪಿಚಂದ ಪವಾರ, ಖೇಮಸಿಂಗ ಪವಾರ, ಬೊಕ್ಕುಸಿಂಗ ರಾಠೋಡ, ಚಂದುಬಾಯಿ ವಠ್ಠಲ ಜಾಧವ, ದೇವಿದಾಸ ಚವ್ಹಾಣ, ಸುಭಾಷ ಜಿ ರಾಠೋಡ, ರಾಜೇಂದ್ರ ಎಸ್ ರಾಠೋಡ, ರಾಕೇಶ ಎಸ್ ಚವ್ಹಾಣ, ಅನ್ನಪೂರ್ಣ ಕಾಶಿನಾಥ ರಾಠೋಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.