ಕಲಬುರಗಿ; ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಲಬುರಗಿಯ ಆರಾಧ್ಯದೈವ ಶರಣಬಸವೇಶ್ವರರು ಹಾಗೂ ಖಾಜಾ ಬಂದೇನವಾಜರ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ. ಜೊತೆಗೇ ದರ್ಗಾಕ್ಕೆ ಹೋಗಿ ಬಂದೇನವಾಜರ ಸಮಾಧಿಗೆ ಚಾದರ್ ಅರ್ಪಿಸಿ ನಮಿಸಿದರು.
ಶರಣಬಸವೇಶ್ವರರ ಮಹಾ ದಾಸೋಹ ಮನೆಗೆ ಬೇಟಿ ನೀಡಿ ಅಲ್ಲಿ 8 ನೇ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪ, 9 ನೇ ಪೀಠಾಧಿಪತಿಗಳಾದ ಚಿ. ದೊಡ್ಡಪ್ಪ ಅಪ್ಪ, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿಯವರನ್ನು ನಮಿಸಿ ಆಶಿರ್ವಾದ ಪಡೆದರು.
ನಂತರ ಖಾಜಾ ಬಂದೇನವಾಜರ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿ ದರ್ಗಾದ ಮುಖ್ಯಸ್ಥ ಸಜ್ಜಾದ ನಶೀನ್ ಖುಸ್ರೋ ಹುಸೇನಿಯವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು. ಬಂದೇನವಾಜರ ಸಮಾಧಿಗೆ ಚಾದರ್ ಅರ್ಪಿಸಿ ನಮಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ, ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್, ಶರಣು ಭೂಸನೂರ್, ನೀಲಕಂಠ ಮೂಲಗೆ ಹಾಗೂ ಕಲಬುರಗಿ , ಜೇವರ್ಗಿಯ ಪಕ್ಷದ ಮುಖಂಡರು ಹಿರಿಯರು, ಅಭಿಮಾನಿಗಳು ಇದ್ದರು.