ಗ್ರಂಥಾಲಯ ಜ್ಞಾನ ಭಂಡಾರ ಕೇಂದ್ರಗಳು : ದೇವಯ್ಯ ಗುತ್ತೇದಾರ

0
34

ಕಲಬುರಗಿ : ಬದುಕಿನಲ್ಲಿ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ತಲುಪಲು ಗ್ರಂಥಾಲಯಗಳ ಪಾತ್ರ ಬಹುದೊಡ್ಡದು ಇದೆ ಎಂದು ಕಲಬುರ್ಗಿಯ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ಯಾವೊಬ್ಬ ವಿದ್ಯಾರ್ಥಿಯು ಎದರಲ್ಲಿಯೂ ಕಡಿಮೆ ಇಲ್ಲ ನಿರಂತರ ಪರಿಶ್ರಮದಿಂದ ಅವರು ಜ್ಞಾನರ್ಜನೆಯನ್ನು ಬೆಳಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಬಹಳ ಬುದ್ಧಿವಂತ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ ಅವರಿಗೆ ಒಂದು ವೇದಿಕೆ ಸಿಗಬೇಕು ಆಗ ಅವರಲ್ಲಿ ಇರುವ ಪ್ರತಿಭೆಯನ್ನು ತಿಳಿಸುತ್ತಾರೆ. ಎಂತಹ ದಡ್ಡನನ್ನು ತಂದು ಗ್ರಂಥಾಲಯದಲ್ಲಿ ಕೂಡಿಸಿದರೆ ತನಗೆ ಗೊತ್ತಿಲ್ಲದ ಹಾಗೆ ಅವನನ್ನು ಗ್ರಂಥಾಲಯ ಜಾಣ್ಮೆ ಮಾಡುವ ಶಕ್ತಿ ಗ್ರಂಥಾಲಯಕ್ಕೆ ಇದೆ.

Contact Your\'s Advertisement; 9902492681

ಗ್ರಂಥಾಲಯದಲ್ಲಿ ಕೂತಿ ಓದುವುದರಿಂದ ಆಂತರಿಕ ಜ್ಞಾನ ಹೆಚ್ಚು ಆಗುತ್ತ ಹೋಗುತ್ತದೆ ಮತ್ತು ಮೋಬೈಲ್ಗಿಂತ ಪುಸ್ತಕ ಓದು ವಿವೇಚನೆ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಪ್ರಸ್ತಾವಿಕವಾಗಿ ಮಾತನಾಡಿ ಗ್ರಂಥಾಲಯ ಒಂದು ವಿಷಯಕ್ಕೆ ಸೀಮಿತವಾಗಿಲ್ಲ ಇಲ್ಲಿ ಹಲವಾರು ಜ್ಞಾನಿಗಳು ಬರೆದಿರುವ ಗ್ರಂಥ ಬಂಡಾರ ಗ್ರಂಥಾಲಯದಲ್ಲಿ ದೊರೆಯುತ್ತವೆ. ವ್ಯಕ್ತಿಯ ವ್ಯಕ್ತಿತ್ವ ಬೆಳಿಬೇಕು ಎಂದರೆ ಅದು ಗ್ರಂಥಾಲಯದಲ್ಲಿ ಸಿಗುವ ಮಾಹಿತಿಯಿಂದ ಹೀಗಾಗಿ ಗ್ರಂಥಾಲಯ ಪಾತ್ರ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇತ್ತೀಚೆಗೆ ಅಂತು ಡಿಜಿಟಲ್ ತಂತ್ರಜ್ಞಾನದಿಂದ ಬಹಳಷ್ಟು ಮಾಹಿತಿ ವಿದ್ಯಾರ್ಥಿಗಳಿಗೆ ಸಿಗುವಂತಾಗಿದೆ ಎಂದು ಅವರು ಹೇಳಿದರು.

ಗ್ರಂಥಾಲಯ ದಿನಾಚರಣೆ ಅಂಗವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಗ್ರಂಥಾಲಯ ಕುರಿತು ಭಾಷಣ ಸ್ಪರ್ಧೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರಬಂಧ ಸ್ಪರ್ಧೆಯನ್ನು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮಗಳು ಮಾಡಿದರು.

ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಮತ್ತು ದ್ವಿತೀಯ, ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ, ದಯಾನಂದ ಅಗಸರ್ ಉದ್ಘಾಟಿಸಿದರು.

ಡಾ. ಪ್ರವೀಣ್ ಕುಮಾರ್ ಕುಂಬಾರಗೌಡ್ರು ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್ ರಂಗನಾಥ್ ಅವರ ಜೀವನ ಮತ್ತು ಸಾಧನೆ ಕುರಿತು ಪರಿಚಯ ಮಾಡಿದರು, ಡಾ. ರಮೇಶ ಲಂಡನಕರ್, ಡಾ. ಮಮತಾ ಮೇಸ್ತ್ರಿ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here