ಪುಸ್ತಕ ಗ್ರಂಥಾಲಯದಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮ

0
19

ಮಾದನಹಿಪ್ಪರಗಿ: ಜಿಲ್ಲಾ ಪಂಚಾಯತ ಕಲಬುರಗಿ, ತಾಲೂಕ ಆಪಂಚಾಯತ ಆಳಂದ ಮಾದನಹಿಪ್ಪರಗಿ ಗ್ರಾಮ ಪಂಚಾಯಿತಿ ಮತು ಗ್ರಂಥಾಲಯದಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮ ಇಂದು ನಡೆಯಿತು.

ಮೇಲ್ವಿಚಾರಕ ಬಲಭೀಮ ಮದ್ರೆ ಪಂಚಾಯಿತಿ ಕರವಸೂಲಿಗಾರ ಸುರೇಶ ರೂಗಿ ಗ್ರಾಮದ ಓದುಗರ ಮನೆಗೆ ಮನೆಗೆ ತೆರಳಿ ಗ್ರಂಥಾಲಯಕ್ಕೆ ದೇಣಿಗೆ ರೂಪವಾಗಿ ಪುಸ್ತಕಗಳನ್ನು ನೀಡಿ ಎಂದು ಕೇಳಿಕೊಂಡರು. ಹಲವಾರು ಜನ ಓದುಗರು ತಾವು ಓದಿದ ಪುಸ್ತಕಗಳನ್ನು ಜೋಳಿಗೆಗೆ ಹಾಕಿದರು. ಪತ್ರಕರ್ತ ಪರಮೇಶ್ವರ ಭೂಸನೂರ ಅವರು ತಮ್ಮಲ್ಲಿದ್ದ ಡಾ. ಬಾಬಾ ಸಾಹೇಬ ಅಂಬೇಡ್ಕರ ಬರೆದ ಎರಡು ಗ್ರಂಥಗಳು ಮತ್ತು ವಿವಿಧ ಲೇಖಕರ ಕವನ ಸಂಕಲಗಳು ಮತ್ತು ಮಹಾಪುರುಷರ ಜೀವನ ಚರಿತ್ರೆಗಳ ಪುಸ್ತಕಗಳನ್ನು ನೀಡಿದರು. ಡಿಜಿಟಲ್ ಯುಗದಲ್ಲಿ ಪುಸ್ತಕ ಓದುಗರ  ಸಂಖ್ಯೆ ಗಣನೀಯವಾಗಿ ಇಳಿದಿದೆ. ಇತಿಹಾಸಕಾರು ಮತ್ತು ಮಹಾಪುರುಷರು ಓದಿನಿಂದಲೇ ಹೆಸರು ವಾಸಿಯಾಗಿದ್ದಾರೆ.

Contact Your\'s Advertisement; 9902492681

ಕಥೆ, ಕಾದಂಬರಿ ಓದುವ ಜನ ಸಿಗುತ್ತಿಲ್ಲ.  ಪಾಲಕರು ತಮ್ಮ ಮಕ್ಕಳನ್ನು ಮೋಬೈಲ್‍ನಿಂದ ದೂರ ಇಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು.  ಜ್ಞಾನವು ನಿಂತ ನೀರಾಗದೆ ಎಲ್ಲಾ ಕಡೆಗೆ ಹರಿದು ಓದುವ ಹವ್ಯಾಸ ಬೆಳೆಯಲಿ ಎಂಬ ಉದ್ದೇಶದಿಂದ ಈ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುತ್ತಿದ್ದೇನೆ ಎಂದು ನುಡಿದರು. ಈ ಸಂದರ್ಭದಲ್ಲಿ ಅನೇಕ ಮನೆಗಳಿಗೆ ಬೇಟಿ ನೀಡಿ ಪುಸ್ತಕಗಳನ್ನು ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here