ಕಲಬುರಗಿ: ಸಮಾಜಿಕ ಜಾಲಾತಾಣದಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಸುಳ್ಳು ಸುದ್ದಿ ಹರಡಿಸಿದ ಆರೋಪ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳ ಆರೋಪಿಯಾಗಿರುವ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಗೆ ಕಲಬುರಗಿ ಪೊಲೀಸರು ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚಿಗಷ್ಟೆ ಪೊಲೀಸ್ ಕಿರುಕುಳಕ್ಕೆ ಒಳಗಾಗಿ ಬಿಜೆಪಿ ಕಾರ್ಯಕರ್ತ ಓರ್ವರು ಗುಣಗುರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆರೋಪಿಸಿ, ಪ್ರಕರಣ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪೊಲೀಸ್ ಇಲಾಖೆ ವಿರುದ್ಧ ಚಿತ್ತಾಪುರ ಪಟ್ಟಣದ ತಹಶೀಲ್ ಕಚೇರಿ ಮುಂದೆ ಇಂದು ಬುಧವಾರ ಮಣಿಕಂಠ ರಾಠೋಡ್ ಪ್ರತಿಭಟನೆ ಹಮ್ಮಿಕೊಂಡಿದರು.
ಇದಕ್ಕೂ ಮುನ್ನ ಮಣಿಕಂಠ ರಾಠೋಡ್ ಜಿಲ್ಲಾ ಪೊಲೀಸ್ ಇಲಾಖೆ ವಿರುದ್ಧ ಸಮಾಜಿಕ ಜಾಲಾತಾಣದಲ್ಲಿ ಸುಳ್ಳು ಆರೋಪ ಮಾಡಿರುವ ಹಿನ್ನೆಲೆ ಮತ್ತು ಪ್ರತಿಭಟನೆಯಲ್ಲಿ ಕಾನೂನು ಸೂವ್ಯಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಬುಧವಾರ ಬೆಳ್ಳಿಗೆ ಕಲಬುರಗಿ ಪೊಲೀಸರು ಮಣಿಕಂಠ ರಾಠೋಡ್ ಅವರನ್ನು ವಶಕ್ಕೆ ಪಡೆದು. ನಂತರ ಗುಣಗುರ್ತಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.