ಸುರಪುರ: ತಾಲೂಕಿನಲ್ಲಿ ರೈತ ಹೋರಾಟಗಾರ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘವನ್ನು ಬಲಿಷ್ಠಗೊಳಿಸಿ ರಾಜ್ಯದಲ್ಲಿ ಹಾಗೂ ತಾಲೂಕಿನಲ್ಲಿ ರೈತಪರ ಸಮಸ್ಯೆಗಳಿಗೆ ಸ್ಪಂದಿಸಿ ನೂತನ ಪದಾಧಿಕಾರಿಗಳು ಹೋರಾಟಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಂಗನಾಥಗೌಡ ಬೈರಿಮರಡಿ ಹೇಳಿದರು.
ಸಭೆಯಲ್ಲಿ ತಾಲೂಕು ಹಾಗೂ ವಿವಿಧ ಗ್ರಾಮಗಳ ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಮಲ್ಲನಗೌಡ ನಾಗರಾಳ(ಗೌರವಾಧ್ಯಕ್ಷ), ಮರಿಲಿಂಗಪ್ಪಗೌಡ ಅಡ್ಡೊಡಗಿ(ತಾಲೂಕು ಅಧ್ಯಕ್ಷ), ಶಾಂತಗೌಡ ಮಾಲಿಪಾಟೀಲ ನಾಗರಾಳ(ಕಾರ್ಯದರ್ಶಿ), ರಂಗನಾಥ ಬಿರೇದಾರ(ಸಂಚಾಲಕರು). ಜಾಲಿಬೆಂಚಿ ಗ್ರಾಮ ಘಟಕ : ಬಸವರಾಜ ಕಟ್ಟಿಮನಿ(ಅಧ್ಯಕ್ಷ),
ಕವಡಿಮಟ್ಟಿ ಗ್ರಾಮ ಘಟಕ : ಮಲ್ಲಿಕಾರ್ಜುನ ಕೊಂಡಗೂಳಿ(ಅಧ್ಯಕ್ಷ), ಪರಶುರಾಮ ದೊಡ್ಡಮನಿ(ಉಪಾಧ್ಯಕ್ಷ). ಮಾಚಗುಂಡಾಳ ಗ್ರಾಮ ಘಟಕ : ಮಲ್ಲಿನಾಥ ಪಾಟೀಲ(ಅಧ್ಯಕ್ಷ) ದೇವರಗೋನಾಲ ಗ್ರಾಮ ಘಟಕ : ರಾಘವೇಂದ್ರ ಹಳಿಸಗರ(ಅಧ್ಯಕ್ಷ)
ನಗರದ ಟೇಲರ್ ಮಂಜಿಲ್ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಹಾಗೂ ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿ ಇಂದು ರೈತರು ಮುಂಗಾರು ಹಂಗಾಮು ಸಂಪೂರ್ಣವಾಗಿ ವಿಫಲಗೊಂಡಿದ್ದರಿಂದ ಸಂಕಷ್ಟದಲ್ಲಿದ್ದು ಮಳೆ ಬಾರದೇ ಕೆಲವು ಕಡೆ ಬಿತ್ತಿರುವ ಬೆಳೆಗಳು ಒಣಗುತ್ತಿವೆ ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆಯದೇ ನಷ್ಟ ಅನುಭವಿಸುತ್ತಿದ್ದಾರೆ ಮತ್ತೊಂದು ಕಡೆ ಗೊಬ್ಬರಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಾರೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸಂಘಟನೆಯನ್ನು ಬಲಪಡಿಸಿ ಎಲ್ಲರೂ ಒಗ್ಗೂಡಿ ರೈತ ಪರ ಹೋರಾಟಕ್ಕೆ ಅಣಿಯಾಗಬೇಕು ಎಂದು ಅವರು ಹೇಳಿದರು.