ಚಂದ್ರಯಾನ ಯಶಸ್ಸು- ಕೆಕೆಆರ್‍ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಸತಸ

0
10

ಕಲಬುರಗಿ; ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಷÀಣಗಳನ್ನು ದೇಶದ 140 ಕೋಟಿ ಮಂದಿ ಕಣ್ತುಂಬಿಕೊಂಡಿದ್ದಾರೆ. ವಿe್ಞÁನಿಗಳ ದಶಕಗಳ ಪರಿಶ್ರಮದಿಂದ ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದೆ. ಚಂದ್ರನ ಮೇಲೆ ಭಾರತದ ಪತಾಕೆ ಹಾರಿಸಿ ದೇಶವಾಸಿಗಳು ಹೆಮ್ಮೆಪಡುವಂತೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಭಾರತೀಯರಾದ ನಾವೆಲ್ಲರೂ ಕೊಂಡಾಡಲೇಬೇಕು ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

1960 ರ ದಶಕದಲ್ಲೇ ವಿಕ್ರಮ್ ಸಾರಾಭಾಯ್ ಅವರು ಚಂದ್ರಾನದ ಬೀಜ ಬಿತ್ತಿದ್ದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ವಿe್ಞÁನಿಗಳ ಕನಸಿಗೆ ಬೆಂಬಲಿಸುವ ಮೂಲಕ ನೀರೆರ್ದಿದ್ದರು. ಂದು ಬಿತ್ತಲ್ಪಟ್ಟ ಚಂದ್ರಯಾನದ ಬೀಜ ಹೆಮ್ಮರವಾಗಿ ಇಂದು ಫಲ ನೀಡಿದೆ. ಇದು ಭಾರತೀಯರೆಲ್ಲರಿಗೂ ಹೆಮ್ಮೆ ಹಾಗೂ ಸಂತಸ ಪಡುವ ಕ್ಷಣವೆಂದು ಅಜಯ್ ಸಿಂಗ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here