ಸುರಪುರ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಸುರಿದ ಮಹಾ ಮಳೆಯಿಂದ ಕೃಷ್ಣಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ತಮ್ಮ ಬದುಕು ಮತ್ತು ಜಮೀನುಗಳನ್ನು ಹಾನಿಗೊಳಿಸಿಕೊಂಡು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದು,ಈಗ ತಮ್ಮ ಗ್ರಾಮಗಳಿಗೆ ತೆರಳಿರುವ ತಾಲ್ಲೂಕಿನ ನೀಲಕಂಠರಾಯನಗಡ್ಡಿ, ಬೆಂಚಿಗಡ್ಡಿ, ತಿಂಥಣಿ,ಹಾವಿನಾಳ,ಹೆಮ್ಮಡಗಿ,ಕರ್ನಾಳ,ಮುಷ್ಠಳ್ಳಿ,ಶೆಳ್ಳಿಗಿ ಮತ್ತಿತರೆ ಸುಮಾರು ಹದಿನೈದು ಗ್ರಾಮಗಳಲ್ಲಿನ ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಸನ್ ಸೇರಾ ಮತ್ತು ಕಾರ್ಮಿಕ ಸಂಘಟನೆಯಾದ ಸಿಐಟಿಯು ವತಿಯಿಂದ ಆಹಾರ ಸಾಮಗ್ರಗಳು,ಬಟ್ಟೆ,ಹಾಸಿಗೆ,ಪಾತ್ರೆಗಳು ಸೇರಿದಂತೆ ಅನೇಕ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸನ್ ಸೇರಾ ಕಂಪನಿಯ ಉದ್ಯೋಗಿಗಳಾದ ವಿಜಯ ಜಾಧವ್,ಮಂಜುನಾಥ,ನಿಂಗಪ್ಪ ಗೋನಾಳ ಹಾಗು ಯಾದಗಿರಿ ಜಿಲ್ಲೆಯ ಕರಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ದವಲಸಾಬ್ ನದಾಫ್,ದಾವೂದ್ ಇಬ್ರಾಹಿಂ ಪಠಾಣ ಸೇರಿದಂತೆ ಅನೇಕರು ಈ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿದ್ದರು.