ಸುರಪುರ: ಮಕ್ಕಳ ಕಲರವ ಫೌಂಡೆಶನ್ ಟ್ರಸ್ಟ್‌ನ ೩ನೇ ವಾರ್ಷಿಕೋತ್ಸವದ ಅಂಗವಾಗಿ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಸಿ ನೆಡುವ ಕಾರ್ಯಾಕ್ರಮವನ್ನು, ಕನ್ನೆಳ್ಳಿ ಗ್ರಾಮದ ಬಸವಪ್ರಭು ಶಾಲಾ ಆವರಣದಲ್ಲಿ ಈ ತಿಂಗಳ ೨೪ರ ಶನಿವಾರ ಆಯೋಜಿಸಲಾಗಿದೆ ಎಂದು ಸಂಘಟಕ ಪ್ರಕಾಶ ಅಂಗಡಿ ಕನ್ನೆಳ್ಳಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಲಕ್ಷ್ಮೀಪೂರ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಪೂಜ್ಯ ಶ್ರೀ. ಬಸವಲಿಂಗಯ್ಯ ಸ್ವಾಮಿಗಳು ಸಾನಿದ್ಯವಹಿಸಲಿದ್ದು, ಶಹಾಪೂರ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಲಿಂಗಣ್ಣ ಪಡಿಶೆಟ್ಟಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಶಹಾಪೂರ ಸಮೃದ್ಧಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿದ್ರಾಮಪ್ಪ ಪಾಟೀಲ್, ರಂಗಂಪೇಟ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಗಳಾದ ಶಾಂತಪ್ಪ ಬೂದಿಹಾಳ, ಸಿ.ಆರ್.ಸಿ ಪರಶುರಾಮ ಚಲುವಾದಿಇತರರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಟ್ರಸ್ಟ್ ಕೋಡಮಾಡುವ ಗೌರವ ಪ್ರಶಸ್ತಿಯನ್ನು ಶಿಕ್ಷಕರು ಹಾಗೂ ಹೆಸರಾಂತ ಮಕ್ಕಳ ಸಾಹಿತಿಗಳಾದ ಶ್ರೀನಿವಾಸ ಚಿತ್ರಗಾರ ಕೊಪ್ಪಳ ಅವರಿಗೆ ಹಾಗೂ ವಾರ್ಷಿಕ ಪ್ರಶಸ್ತಿಯನ್ನು ಬಾಲ ಪ್ರತಿಭೆಗಳಾದ ವಿರೇಶ ಹೊಗರಿ ಕಕ್ಕೇರಿ, ಶ್ರೀಪಲ್ಲವಿ ಕೆಂಭಾವಿ, ಅಭಿಶೇಕ ಹುಣಸಗಿ, ಅರುಣಾದೇವಿ ಸದಬ, ಶ್ರೇಯಾ ಖಂಡಾರೆ ಈ ಪ್ರತಿಭೆಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಹಾಗೂ ಈ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಕೂಟಗಳಲ್ಲಿ ಉತ್ತಮ ಸಾಧನೆಮಾಡಿದ ವಿದ್ಯರ್ಥಿಗಳಿಗೆ ಸನ್ಮಾನಿಸುವುದರ ಜೋತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಹಾಗು ಸಸಿ ನೆಡುವ ಅಭಿಯಾನ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಅಂಗಡಿ ತಿಳಿಸಿದ್ದಾರೆ.