ಕಾರ್ಮಿಕ ಸಂಹಿತೆಗಳ ಅನುಷ್ಠಾನ ವಿರೋಧಿಸಿ ಕಲಬುರ್ಗಿಯಲ್ಲಿ ಧರಣಿ

0
171

ಕಲಬುರಗಿ: ಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ಸಂಹಿತೆಗಳಲ್ಲಿ ಬೆರೆಸುವುದನ್ನು ವಿರೋಧಿಸಿ ಹಾಗೂ ಮಾರಾಟ ಪ್ರಚಾರ ನೌಕರರಿಗೆ ಎನ್‌ಪಿಇ ಕಾಯ್ದೆಯಡಿ ಶಾಸನಬದ್ಧ ಕೆಲಸದ ನಿಯಮಾವಳಿಗಳನ್ನು ಸೂಚಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ಸ್ಟೇಟ್ ಮೆಡಿಕಲ್ ಆಂಡ್ ಸೇಲ್ಸ್ ರಿಪ್ರಂಜಂಟೇಟಿವ್ ಅಸೋಸಿಯೇಶನ್ ನೇತೃತ್ವದಲ್ಲಿ ಔಷಧ ಮಾರಾಟ ಪ್ರತಿನಿಧಿಗಳು ಜಿಲ್ಲಾ ಕಾರ್ಮಿಕ ಕಚೇರಿಯ ಕಾರ್ಮಿಕ ಭವನದ ಮುಂದೆ ಧರಣಿ ಹಮ್ಮಿಕೊಂಡಿದ್ದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಅಶ್ಪಾಕ್, ಉಪಾಧ್ಯಕ್ಷ ಸಂಜೀವ್ ದೇಶಪಾಂಡೆ, ಆನಂದ್ ಎನ್.ಜೆ., ಪಾಂಡುರಂಗ್, ಮಹಾದೇವ್, ಶರಣಬಸಪ್ಪಾ ಉಪಳಾಂವ್ ಮುಂತಾದವರ ನೇತೃತ್ವದಲ್ಲಿ ಧರಣಿ ನಡೆಯಿತು.
ಪ್ರತಿಭಟನೆಕಾರರು ನಂತರ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಕ್ಕೆ ತರದಿರುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಔದ್ಯೋಗಿಕ ಸುರಕ್ಷತೆ ಮತ್ತು ಕೆಲಸದ ನಿಯಮದ ಸಂಹಿತೆಯಡಿಯಲ್ಲಿ ೧೯೭೬ರಲ್ಲಿ ಜಾರಿಯಾದ ಎನ್‌ಪಿಇ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಪ್ರಸ್ತಾಪಿಸಲಾಗಿದೆ. ಈ ಬದಲಾವಣೆಯಿಂದ ಪ್ರಸ್ತುತದಲ್ಲಿರುವ ಮಾರಾಟ ಪ್ರಚಾರ ನೌಕರರ ಹಕ್ಕುಗಳನ್ನು ಮುಕ್ತಾಯಗೊಳಿಸಿದಂತಾಗುತ್ತದೆ ಎಂದು ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಮಾರಾಟ ಪ್ರಚಾರ ನೌಕರರಿಗೆ ಕಾನೂನುಬದ್ಧ ಕೆಲಸದ ನಿಯಮಾವಳಿಗಳು ಇಲ್ಲದ ಕಾರಣದಿಂದಾಗಿ ಅವ್ಯವಸ್ಥೆಗಳಿಂದ ವಿವಿಧ ಕೈಗಾರಿಕೆಗಳಲ್ಲಿರುವ ಮಾರಾಟ ಪ್ರಚಾರ ನೌಕರರು ಜೀವ ಕಳೆದುಕೊಂಡಿದ್ದಾರೆ. ಅನೇಕ ಯುವ ನೌಕರರು ಮಾರಾಟದ ಒತ್ತಡವನ್ನು ಎದುರಿಸಲಾಗದೇ ಬಲಿಯಾಗಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here