ರಸ್ತೆ, ನೀರಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

0
38

ಕಲಬುರಗಿ: ನಗರದ ಹೊರವಲಯದ ಡಬರಾಬಾದಿ ಗ್ರಾಮದ ಬಳಿ ಇರುವ ಕೃಷ್ಣಾ ಕಾಲೋನಿಗೆ ಕುಡಿಯುವ ನೀರು ಹಾಗೂ ಸಿ.ಸಿ. ರಸ್ತೆ ನಿರ್ಮಿಸಲು ಒತ್ತಾಯಿಸಿ ಗುರುವಾರ ವೀರ ಕನ್ನಡಿಗರ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಸಂಘಟನೆಯ ಅಧ್ಯಕ್ಷ ಅಮೃತ್ ಪಾಟೀಲ್ ಸಿರನೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶೀಲಾ ಮಂಗಳಮುಖಿ, ಶಿವಮ್ಮ, ಚಿತ್ರವತಿ, ಮಾಲಾ ಮಂಗಳಮುಖಿ, ಪವನಕುಮಾರ್, ರವಿ ಒಂಟಿ, ಅವಿನಾಶ್ ಮೂಲಗೆ, ರಿಷಿ ವಾಡೇಕರ್, ಭರತ್ ಭೂಷಣ್, ಶಿವಾಜಿ ಚವ್ಹಾಣ್, ಪ್ರವೀಣ್ ಪವಾರ್, ಶ್ರಾವಣ್ ಬೆಡಜೇವರ್ಗಿ, ರಾಜು ಕಣ್ಣೂರ್, ಅರುಣಕುಮಾರ್, ಶಿವಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕೃಷ್ಣಾ ಕಾಲೋನಿಯಲ್ಲಿ ಕುಡಿಯುವ ನೀರು ಹಾಗೂ ಸಿ.ಸಿ. ರಸ್ತೆಗಳು ಇಲ್ಲದೇ ಇರುವುದರಿಂದ ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಂಗಳಮುಖಿಯರು, ದೀನ, ದಲಿತರು ವಾಸಿಸುವ ಕಾಲೋನಿಯಾಗಿದ್ದು, ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಾ ಕಾಲೋನಿಯ ನಾಗರಿಕರು ಕುಡಿಯುವ ನೀರಿಗಾಗಿ ಎರಡು ಕಿ.ಮೀ. ಅಲೆದಾಡಬೇಕಾಗಿದೆ. ಕೂಡಲೇ ಬಡಾವಣೆಗೆ ಕುಡಿಯುವ ನೀರು ಒದಗಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here