ಆದರ್ಶ ವಿದ್ಯಾಲಯದ 6 ನೇ ತರಗತಿಯ ದಾಖಲಾತಿಗಾಗಿ ಕೌನ್ಸಲಿಂಗ್

0
11

ಕಲಬುರಗಿ; ಜೇವರ್ಗಿ ತಾಲ್ಲೂಕಿನ ಚನ್ನೂರ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ.) ಚನ್ನೂರ ಶಾಲೆಯಲ್ಲಿ 2023-24 ನೇ ಸಾಲಿನ 6ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳಿಗೆ (ಸೀಟುಗಳಿಗೆ) ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು 1:10 ಅನುಪಾತದಂತ ರಾಜ್ಯ ಕಛೇರಿಯಿಂದ ಪಾಲಕರ ಮೊಬೈಲ್ ಗೆ ಎಸ್.ಎಂ.ಎಸ್. ಕಳುಹಿಸಲಾಗಿದೆ. ಎಸ್.ಎಂ.ಎಸ್. ಸ್ವೀಕರಿಸಿದ ಪಾಲಕರು ಹಾಗೂ ವಿದ್ಯಾರ್ಥಿಗಳು ಆಗಷ್ಟ್ 31 ರಂದು ಬೆಳಿಗ್ಗೆ 10.00 ಕ್ಕೆ ಚನ್ನೂರ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ.) ಚನ್ನೂರ ಶಾಲೆಯಲ್ಲಿ ನಡೆಯುವ ಕೌನ್ಸಲಿಂಗ್ ಸರಿಯಾದ ಸಮಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕೆಂದು ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಬಿ. ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here