ಲೋಕಸಭೆ ಚುನಾವಣೆಯಲ್ಲಿ ಐದು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ

0
15

ಕಲಬುರಗಿ: ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಯಾದ ಐದು ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಕರ್ನಾಟಕ ಮುಸ್ಲಿಂ ಪೊಲಿಟಿಕಲ್ ಫೋರಮ್ ಮುಖಂಡರಾದ ಸಿರಾಜ್ ಜಾಫ್ರಿ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯ ಸಂಪೂರ್ಣ ಬೆಂಬಲ ನೀಡಿದೆ. ಸಾಮಾಜಿಕ ನ್ಯಾಯ ಮತ್ತು ಭದ್ರತೆ ಹಾಗೂ ಜಾತ್ಯಾತೀತ ಸಿದ್ಧಾಂತ ಹೊಂದಿರುವ ಪಕ್ಷ ಎಂದು ಕರೆಸಿಕೊಳ್ಳು ಕಾಂಗ್ರೆಸ್‌ . ವಿಧಾನ ಪರಿಷತ್ ಚುನಾವಣೆಯಲ್ಲಿ ಮುಸ್ಲಿಮರಿಗೆ ಎಂಎಲ್‌ಸಿ ನಿರಾಕರಿಸಿದರಿಂದ ಪಕ್ಷದ ವಿರುದ್ಧ ಮುಸ್ಲಿಮರಲ್ಲಿ ಅಸಮಧಾನ ಕಾಡುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಳೆದ 15 ವರ್ಷಗಳಿಂದ ಕರ್ನಾಟಕದಿಂದ ಯಾವುದೇ ಮುಸಲ್ಮಾನರೂ ಸಂಸದರಾಗಿಲ್ಲ ಆಯ್ಕೆ ಆಗಿಲ್ಲ. ಸಮುದಾಯದಿಂದ ಕೊನೆಯದಾಗಿ ಗುಲ್ಬರ್ಗಾದಿಂದ ಸ್ಪರ್ಧೆಗೆ ಇಳಿಸಲಾಗಿತು ಇದರುವರೆಗೆ ಪಕ್ಷ ಮುಸ್ಲಮ್ ರಿಗೆ ಟಿಕೆಟ್ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೀದರ್ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಸಾಮಾನ್ಯ ಸ್ಥಾನವಾದ ನಂತರವೂ ಮುಸ್ಲಿಂ ಅಭ್ಯರ್ಥಿಗೆ ಪಕ್ಷದಿಂದ ಸ್ಪರ್ಧೆಗೆ ಅವಕಾಶ ನೀಡಿಲ್ಲ. 2009 ರಿಂದ 3 ಅವಧಿಯ ಮುಸ್ಲಿಂ ಅಭ್ಯರ್ಥಿಗಳ ಗೆಲವು ಸುಲಭವಾಗಿದರೂ ಟಿಕೆಟ್ ನೀಡಿಲ್ಲ. ಹುಬ್ಬಳ್ಳಿ ಧಾರವಾಡ, ಹಾವೇರಿ, ಬೆಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಮತ್ತು ಈ ಎಲ್ಲಾ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿ ಸಂಸದರಾಗಿದರು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ನಾಮನಿರ್ದೇಶನ ಮಾಡುವಲ್ಲಿ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ. ಕರ್ನಾಟಕದ ಚುನಾವಣೆಯನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಕುಡುಗೆ ಮಹತ್ವದಾಗಿದೆ. ಮುಸ್ಲಿಂ ಸಮುದಾಯದ ಸಬಲೀಕರಣ ಬಗ್ಗೆ ಕಾಳಜಿ ವಹಿಸಿ ಚುನಾವಣೆಗಳಲ್ಲಿ ಮಹತ್ವ ನೀಡಬೇಕೆಂದು ಆಗ್ರಹಿಸಿದರು

ಕೆಎಂಪಿಎಫ್ ಅಧ್ಯಕ್ಷ ನ್ಯಾಯವಾದಿ  ಅಜೀಮುದ್ದೀನ್, ಕೆಎಂಪಿಎಫ್ ಸಂಚಾಲಕ ಅಲೀಮ್ ಅಹ್ಮದ್, ತಹಸೀನ್ ಅಲಿ ಜಮಾದಾರ್ ಬಸ್ವಕಲ್ಯಾಣ, ಅಡ್ವ ಅಬ್ದುಲ್ ಜಬ್ಬಾರ್ ಗೋಲಾ, ಶಹನವಾಜ್ ಖಾನ್ ಶಾಹೀನ್, ಅಫ್ಜಾಲ್ ಮಹಮೂದ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here