ಶ್ರೀ ಮಹಾ ಶಿವಶರಣೆ ರೇಣುಕಾ ಮಾತಾ ಟ್ರಸ್ಟ್ ಪ್ರಶಸ್ತಿ ಪ್ರದಾನ ಪುಸ್ತಕ ಬಿಡುಗಡೆ

0
10

ಸುರಪುರ:ಜಗತ್ತಿನಲ್ಲಿ ಎಲ್ಲಾ ಭಾಷೆಗಳಿಗಿಂತಲೂ ಮಿಗಿಲಾದ ಭಾಷೆ ಎಂದರೆ ಅದು ಸಂಗೀತ ಭಾಷೆಯಾಗಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ನಗರದಲ್ಲಿ ಶ್ರೀ ಶಿವಶರಣೆ ರೇಣುಕಾ ಮಾತಾ ಟ್ರಸ್ಟ್ ವತಿಯಿಂದ ಶಿವಶರಣೆ ರೇಣುಕಾ ಮಾತೆಯ 7ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶಿವಶರಣೆ ರೇಣುಕಾ ಮಾತೆ ಜ್ಞಾನ ಸಿಂಚನ ಪ್ರದಾನ,ಪುಸ್ತಕ ಬಿಡುಗಡೆ ಹಾಗೂ ಸಂಗೀತೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಜಯರಾಮ ಕಟ್ಟಿಮನಿಯವರು ಮಗಳಿಗಾಗಿಯೇ ದೇವಸ್ಥಾನವನ್ನು ಕಟ್ಟಿಸಿ ಮಾದರಿಯಾಗಿದ್ದಾರೆ.ದೇವಸ್ಥಾನದಲ್ಲಿ ಮಗಳು ತಾಯಿಯಾದರೆ,ತಂದೆಯಾಗಿದ್ದ ಜಯರಾಮ ಕಟ್ಟಿಮನಿಯವರು ಮಗಳನ್ನು ರೇಣುಕಾ ಮಾತೆ ಎಂದು ಕರೆಯುವ ಮೂಲಕ ತಾನು ಮಗನಾದ,ಇಂತಹ ವಿಶೇಷವಾದ ಸಂಬಂಧ ಎಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.ಅಲ್ಲದೆ ಇಲ್ಲಿ ನಿರಂತರವಾಗಿ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಟ್ರಸ್ಟ್ ವತಿಯಿಂದ ನೀಡಲಾದ ಶಿವಶರಣೆ ರೇಣುಕಾ ಮಾತಾ ಜ್ಞಾನ ಸಿಂಚನ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಗಾಯಕಿ ಸುನಂದಾ ಬಿ ಸಾಲವಾಡಗಿ ಮಾತನಾಡಿ,ಇಂತಹ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ನನಗೆ ಪ್ರಶಸ್ತಿ ನೀಡಿರುವುದು ತುಂಬಾ ಸಂತೋಸವಾಗಿದೆ ಎಂದರು.ಅಲ್ಲದೆ ಸಂಗೀತ ಎಂಬುದು ಸಮುದ್ರವಿದ್ದಂತೆ ಅದನ್ನು ಎಷ್ಟು ಕಲಿತರು ಕಡಿಮೆಯೆ ನಾನು ಇನ್ನೂ ಕಲಿಯಬೇಕಾಗಿರುವುದು ಬಹಳಷ್ಟಿದೆ,ಅದರಂತೆ ಇಲ್ಲಿರುವ ಎಲ್ಲಾ ಸಂಗೀತ ಅಭ್ಯಾಸ ಮಾಡುತ್ತಿರುವ ಮಕ್ಕಳು ನಿರಂತರ ಅಭ್ಯಾಸ ಮಾಡಿ ಸಂಗೀತ ಲೋಕದಲ್ಲಿ ಮಿನುಗುವಂತಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ,ಧಾರವಾಡದ ಕರ್ನಾಟಕ ವಿ.ವಿಯ ದೃಶ್ಯಕಲಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ:ಬಸವರಾಜ ಕಲೆಗಾರ ಅವರು ಬಿಡುಗಡೆಗೊಂಡ ಎರಡು ಕೃತಿಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ನಂತರ ಯುವ ಸಾಹಿತಿಗಳಾದ ಪ್ರಲ್ಹಾದ್ ಜೆ ಕಟ್ಟಿಮನಿ ರಚಿಸಿರುವ ಆಧ್ಯಾತ್ಮದಾನಂದ ಹಾಗೂ ಮರೆಪ್ಪ ಎಸ್.ನಾಟೇಕಾರ ಬರೆದ ಮನದನಿಯ ಮಳೆ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.ನಂತರ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಸುನಂದಾ ಬಿ ಸಾಲವಾಡಗಿ,ರವಿಕುಮಾರ ಆಳಂದ,ಭೀಮಾಶಂಕರ ಬಿದನೂರ ಅವರುಗಳ ನೇತೃತ್ವದಲ್ಲಿ ಯುವ ಗಾಯಕರುಗಳಾದ ಮೇಘನಾ ಪತ್ತಾರ,ಸುಜಾತಾ ಪಂಚಾಂಗಮಠ,ಪ್ರಿಯಾಂಕ ಪತ್ತಾರ,ಸಾವಿತ್ರಿ ಗಾಳಿ,ಸಮರ್ಥ ಪಂಚಾಂಗಮಠ,ನೇಹಾ ಸುರಪುರ ಅವರುಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್,ಟ್ರಸ್ಟ್ ಕಾರ್ಯದರ್ಶಿ ಜಯರಾಮ್ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಟಿ.ಎಚ್.ಓ ಡಾ:ಆರ್.ವಿ ನಾಯಕ,ವಿರುಪಾಕ್ಷಿ ಕೋನಾಳ,ನಾಗೇಶ ಕಾಟಗಿ,ಪ್ರವೀಣ ಕಟ್ಟಿಮನಿ,ಪ್ರದೀಪ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here