ಶಾಲೆಯ ಮಕ್ಕಳೇ ನನ್ನ ಮಕ್ಕಳು: ನೀಲಮ್ಮ ಅಂಗಡಿ

0
13

ಅಫಜಲಪೂರ: ಕಳೆದ ೫ ವರ್ಷಗಳಿಂದ ಅಫಜಲಪೂರ ತಾಲೂಕಿನ ಬಿದನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನೇ ನನ್ನ ಮಕ್ಕಳೆಂದು ಭಾವಿಸಿ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ ಎಂದು ಕಲಬುರ್ಗಿಗೆ ವರ್ಗಾವಣೆಗೊಂಡ ಮುಖ್ಯಗುರುಗಳಾದ ನೀಲಮ್ಮ ಅಂಗಡಿ ಹೇಳಿದರು.

ತಾಲೂಕಿನ ತಾಲೂಕಿನ ಬಿದನೂರ ಗ್ರಾಮದ ವಿರುಪಾಕ್ಷೇಶ್ವರ ಮಠದಲ್ಲಿ ಗ್ರಾಮಸ್ಥರಿಂದ ಸನ್ಮಾನ ಹಾಗೂ ಅತ್ಯುತ್ತಮ ಮುಖ್ಯಗುರುಗಳ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀಲಮ್ಮ ಅಂಗಡಿ, ಮಾಡುವ ಕಾಯಕವನ್ನು ಸತ್ಯ ನಿಷ್ಠೆಯಿಂದ ಮಾಡಿದ್ದೇನೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ,ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಎಸ್‌ಡಿಎಮಸಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ನೀಡಿದ ಸಹಕಾರದಿಂದ ಒಳ್ಳೆಯ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಭಾವುಕರಾಗಿ ನುಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ವಿರುಪಾಕ್ಷೇಶ್ವರ ಮಠದ ಪೀಠಾಧಿಪತಿ ಯಮುನಯ್ಯ ಗುರುಗಳು, ನೀಲಮ್ಮ ಅಂಗಡಿಯವರು ತಮ್ಮ ಸೇವಾ ಅವಧಿಯಲ್ಲಿ ಶಾಲೆಯ ಮಕ್ಕಳಿಗಾಗಿ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಹಲವು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.ಅವರ ಸೇವೇಗೆ ಅತ್ಯುತ್ತಮ ಮುಖ್ಯಗುರುಗಳ ಪ್ರಶಸ್ತಿ ಒಲಿದು ಬಂದಿದೆ ಎಂದು ಹೇಳಿದರು.

ನೀಲಮ್ಮ ಅಂಗಡಿಯವರ ಜೀವನ ಸಾಧನೆ ಕುರಿತು ರಚಿಸಿ ಹಾಡಿದ ಶಿವಪುತ್ರ ಹೂಗಾರ ಗೀತೆಗೆ ತಬಲಾ ಸಾಥ್ ನೀಡುವ ಮೂಲಕ ಸೂರ‍್ಯಕಾಂತ ಮಾಸ್ತರ್ ಕಾರ್ಯಕ್ರಮವನ್ನು ಮತ್ತಷ್ಟು ಅದ್ಭುತಗೊಳಿಸಿದರು.

ಸಹಶಿಕ್ಷಕಿ ವಿದ್ಯಾವತಿ ಸುಂದರವಾಗಿ ನಿರೂಪಿಸಿದರು.ವೇದಿಕೆಯ ಮೇಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅರುಣಕುಮಾರ ಹರಳಯ್ಯ,ಸದಸ್ಯರಾದ ಅಂಬಾರಾಯ ವರವಿ,ಬುದ್ಧಿವಂತ ಚಿಕ್ಕೌಲಗಿ,ಶಿವಾನಂದ ಜೋಗೂರ,ಸಿದ್ದು,ಮಹಾಂತಯ್ಯ ಗುತ್ತೇದಾರ,ಸ್ವಪ್ನಾ ಪಾಟೀಲ್,ರಮೇಶ ಪಾಟೀಲ, ಅಕ್ಷತಾ,ಮಲ್ಲಿಕಾರ್ಜುನ ಸೇರಿದಂತೆ ಶಾಲೆಯ ಮಕ್ಕಳು, ಸಿಬ್ಬಂದಿ ವರ್ಗ,ಬಿದನೂರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here