ಕಾನೂನು, ನೈತಿಕ ಮೌಲ್ಯಗಳಿಂದ ಸಮಾಜ ಸದೃಢವನ್ನಾಗಿ ಮಾಡಬಹುದು

0
11

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾನಿ ಪದವಿ ಮಹಾವಿದ್ಯಾಲಯದಲ್ಲಿ 2022-23 ನೇ ಸಾಲಿನ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಐದನೇಯ ದಿನದ ಉಪನ್ಯಾಸಕರಾಗಿ ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ ಕಾನೂನು ವಿಭಾಗದ ಪ್ರಾದ್ಯಾಪಕರಾದ ಡಾ. ರೇಣುಕಾ ಗುಬ್ಬೆವಾಡ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾನೂನು ಮತ್ತು ನೈತಿಕತೆ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾನೂನನ್ನು ಪರಿಪಾಲಿಸಬೇಕಾಗಿರುವಂತಹದು ಅತಿ ಅವಶ್ಯವಾಗಿರುತ್ತದೆ, ಕಾನೂನೇ ಮಾಡಬೇಕೆನ್ನುವಂತಹ ಮನೋಭಾವನೆಯನ್ನು ಬಿಟ್ಟು ನಮ್ಮ ಜವಾಬ್ದಾರಿವು ಸಹ ಅಷ್ಟೇ ಅವಶ್ಯವಾದದ್ದು ಹಾಗಾಗಿ ಕಾನೂನು ಜೊತೆಗೆ ನೈತಿಕತೆ ಎನ್ನುವುದು ಬಹಳ ಪ್ರಮುಖವಾಗಿರುವುದೆಂದು ಇಂದಿನ ಯುವಜನತೆ ಅದನ್ನು ಜೀವನುದ್ದಕ್ಕು ಮೈಗೂಡಿಸಿಕೊಂಡು ಮುನ್ನೆಡೆಯಬೇಕೆಂದು ಶಿಬಿರಾರ್ಥಿಗಳನ್ನು ಕುರಿತು ಪ್ರಶ್ನೆಗಳನ್ನು ಕೇಳುವುದರ ಮೂಲಕ ವಿಷಯವನ್ನು ಮನಮುಟ್ಟುವಂತೆ ಮಂಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಘನ-ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಎಸ್. ಕಾಗೆ ಯವರು ವರದಕ್ಷಣೆಯು ಸಹ ಕಾನೂನಿನ ಬಾಹಿರವಾಗಿರತಕ್ಕಂತ ವಿಷಯ, ಅಲ್ಲಿಯು ಸಹ ನಮ್ಮ ಯುವಕರು ಮುಂದಿನ ದಿನಗಳಲ್ಲಿ ವರದಕ್ಷಣೆ ವಿರೋಧವಾಗಿ ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ತಿಳಿಹೇಳಿದರು.

ವೇದಿಕೆಯ ಮೇಲೆ ರಾ.ಸೇ.ಯೋ ಯ ‘ಅ’ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ. ಪ್ರಾಣೇಶ ಎಸ್., ಹಾಗೂ ‘ಬ’ ಘಟಕದೆ ಕಾರ್ಯಕ್ರಮಾಧಿಕಾರಿಗಳಾದ ಡಾ.ಶಂಕ್ರಪ್ಪ ಕೆ. ಉಪಸ್ಥಿತರಿದ್ದರು ಮತ್ತು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕೃಷ್ಣಾ ತಂಡದವರು ಅಚ್ಚು-ಕಟ್ಟಾಗಿ ನಿರ್ವಹಣೆಯನ್ನು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here