ಶ್ರೀ ಜನನಿ ಕಾಲೇಜ್ ವಿದ್ಯಾರ್ಥಿನಿಯರ ವಾಗಣಗೇರ ಕೋಟೆ ಕ್ಷೇತ್ರ ಪ್ರವಾಸ

0
9

ಸುರಪುರ: ನಗರದ ಶ್ರೀ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ವತಿಯಿಂದ ವಿದ್ಯಾರ್ಥಿನಿಯರಿಗೆ ವಾಗಣಗೇರಾ ಕೋಟೆಯಲ್ಲಿ ಕೋಟಿಗೆ ಕ್ಷೇತ್ರ ಪ್ರವಾಸ ಕೈಗೊಂಡು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಡಾ:ಆದಿಶೇಷ ನೀಲಗಾರ ಮಾತನಾಡಿ,ಸ್ಮಾರಕಗಳ ಪ್ರತ್ಯಕ್ಷವಾಗಿ ಕಂಡು ಇತಿಹಾಸವನ್ನು ತಿಳಿದಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ವಿಶ್ವದ ಇತಿಹಾಸವನ್ನು ಅಭ್ಯಸಿಸುವ ನಾವು ನಮ್ಮ ಸ್ಥಳೀಯ ಇತಿಹಾಸವನ್ನು ಕಡೆಗಣಿಸಿರುತ್ತೇವೆ. ಮೊದಲು ನಮ್ಮ ಇತಿಹಾಸವನ್ನು ತಿಳಿಯಬೇಕು.ವಾಗಣಗೇರಾ ಕೋಟೆ ಸುರಪುರದ ಗೋಸಲ ವಂಶಜರು ನಿರ್ಮಿಸಿದರು. ಸುರಪುರಕ್ಕೆ ಮೊದಲು ವಾಗಣಗೇರಿ ಅವರ ರಾಜ್ಯಧಾನಿಯಾಗಿತ್ತು. ಮೊಘಲ್ ಸಾಮ್ರಾಟ ಔರಂಗಜೇಬನನ್ನು ಇದೆ ಕೋಟೆಯಲ್ಲಿ ಸೋಲಿಸಿದರು. ಈ ಮೂಲಕ ದಕ್ಷಣ ಭಾರತದ ದೇಗುಲಗಳನ್ನು ರಕ್ಷಿಸಿದ ಕೀರ್ತಿ ಇಲ್ಲಿಯ ರಾಜ್ಯರದ್ದು ಎಂದು ವಿವರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಉಪನ್ಯಾಸಕರಾದ ವೆಂಕಟೇಶ ಜಾಲಗಾರ,. ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ನಬಿಸಾಬ, ನಂದಿನಿ ಅಸಗಳ್ಳಿ, ಪ್ರಿಯಾ, ಹಣಮಂತ್ರಾಯಗೌಡ, ಶಿವು ಕ್ವಾಟಿ, ಶ್ರೀದೇವಿ ನಾಯಕ, ಸೀಮರಿನ್ ಹಾಗೂ ಪ್ರಥಮ ಧರ್ಜೆ ಸಹಾಕರಾದ ಶೃತಿಗೌಡ, ಹುಲಗಮ್ಮ, ಬಸವರಾಜ ಮತ್ತು ಯಲ್ಲಮ್ಮ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here