371 ಜೆ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ದುಂಡು ಮೇಜಿನ ಸಭೆಯಲ್ಲಿ ಒತ್ತಾಯ

0
186

ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಜರುಗಿದ ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ನೂತನ ಸರ್ಕಾರ ರಚನೆಯಾದ ನಂತರ ಕಲ್ಯಾಣದ ಜನಮಾನಸ ಅಪಾರ ನಿರೀಕ್ಷೆಗಳು ಇಟ್ಟುಕೊಂಡಿದೆ ಸರ್ಕಾರ ಇದಕ್ಕೆ ಪೂರಕವಾಗಿ ದಿಟ್ಟತನದ ನಿರ್ಧಾರಗಳು ಕೈಗೊಂಡು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಬದ್ದತೆ ಪ್ರದರ್ಶಿಸುವದು ಅತಿ ಅವಶ್ಯವಾಗಿದೆ ಎಂದು ಕಲ್ಯಾಣ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ದುಂಡು ಮೇಜಿನ ಸಭೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ನಡೆದ ಮಹತ್ವದ ದುಂಡು ಮೇಜಿನ ಸಭೆಯು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಜರುಗಿತು.

Contact Your\'s Advertisement; 9902492681

ಈ ಮಹತ್ವದ ಸಭೆಯಲ್ಲಿ ಲಿಂಗರಾಜ ಸಿರಗಾಪೂರ,ಪ್ರೊ.ಕೇದಾರ ಪಾಟೀಲ, ಅಬ್ದುಲ್ ರಹೀಂ, ಸಾಜಿದ್ ಅಲಿ ರಂಜೊಹಳ್ವಿ,ಶಾಂತಪ್ಪ ಕಾರಭಾಸಗಿ,ಸಾಬಿರ್ ಅಲಿ,ಬ‌ವರಾಜ ಮ್ಯಾಗಿ,ಸೂರ್ಯಕಾಂತ ಕೆ.ಬಿ, ಭೀಮರಾಯ ಕಂದಳ್ಳಿ, ಅಬ್ದುಲ್ ಖದೀರ್,ರಾಜು ಜೈನ್, ಡಾ. ಮಾಜಿದ ದಾಗಿ ಮಲ್ಲಿನಾಥ ಸಂಘಶೆಟ್ಟಿ, ಶರಣಬಸಪ್ಪ.ಕೆ,ಎಮ್.ಎ.ಖಾನ್,ಮಾಣಿಕರವರು ದುಂಡು ಮೇಜಿನ ಸಭೆಯಲ್ಲಿ ತಮ್ಮ ತಮ್ಮ ಸ್ಪಷ್ಟ ನಿಷ್ಠುರ ನಿಲುವು ವ್ಯಕ್ತಪಡಿಸಿದರು.ದುಂಡು ಮೇಜಿನ ಸಭೆಯಲ್ಲಿ ಸರ್ವಾನುಮತದಿಂದ ಮಹತ್ವದ ನಿರ್ಣಯಗಳು  ಕೈಗೊಳ್ಳಲಾಯಿತು.

ಸಂವಿಧಾನದ 371ನೇ ಜೇ ಕಲಂ ತಿದ್ದುಪಡಿಯ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ನೇಮಕಾತಿ ಮತ್ತು ಮುಂಬಡ್ತಿಗಳಲ್ಲಿ ಕಲ್ಯಾಣದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕಬೇಕು.  ನೇಮಕಾತಿಗಳು ಮತ್ತು ಮುಂಬಡ್ತಿಗಳು ಸಂಪುಟ ಉಪ ಸಮಿತಿಯು ಪರಿಶೀಲನೆ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು.

ಖಾಲಿ ಇರುವ ನಮ್ಮ ಪಾಲಿನ ಎಲ್ಲಾ ಹುದ್ದೆಗಳು ಕಾಲಮಿತಿಯಲ್ಲಿ ಭರ್ತಿ ಮಾಡಲು ವಿಶೇಷ ಕ್ರಮ ಕೈಗೊಳ್ಳಬೇಕು. 371ನೇ ಜೇ ಕಲಂ ನಿಯಮದಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಾದೇಶಿಕ ಕಚೇರಿ ಕಲಬುರ್ಗಿಯಲ್ಲಿ ಸ್ಥಾಪಿಸಬೇಕು‌. ಅದರಂತೆ ಶಾಖಾ ಕಛೇರಿಗಳು ಎಳು ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ತರಬೇಕು ಎಂದು ಒತ್ತಾಯಿಸಲಾಯಿತು.

ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವುದು ಅತಿ ಅವಶ್ಯವಾಗಿದೆ. ಈ ಬಗ್ಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಕೆಕೆಆರ್ ಡಿಬಿಯಿಂದ ದೂರ ದೃಷ್ಟಿ ಕೊನದ ಐದು ವರ್ಷಗಳ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ನಂಜುಂಡಪ್ಪ ವರದಿಯ ಮಾನ ದಂಡದಂತೆ ಕಲ್ಯಾಣದ ಎಳು ಜಿಲ್ಲೆಗಳ ಒಂದು ವರದಿ ರಚಿಸಬೇಕು.ಈ ವರದಿ ಒಂದು ಗ್ರಾಮ ಪಂಚಾಯಿತಿಯನ್ನು ಸುಚ್ಯಂಕ ಮಾಡಿಕೊಂಡು ವರದಿ ರಚಿಸಬೇಕು ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಆಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಸರ್ಕಾರ ತನಿಖೆ ಮಾಡಲು ಕೈಗೊಂಡ ಕ್ರಮದ ವರದಿ ಬಹಿರಂಗ ಪಡಿಸಬೇಕು.ಅದರಂತೆ ತಪಿಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಕಲ್ಯಾಣದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನೀಲಿ ನಕ್ಷೆ ಸಿದ್ದಪಡಿಸಿ ಅದಕ್ಕೆ ಪೂರಕವಾಗಿ ಕಾಲಮಿತಿಯ ಯೋಜನೆಗಳನ್ನು ರೂಪಿಸಿ ನೀರಾವರಿ, ಕೈಗಾರಿಕೆ, ಶಿಕ್ಷಣ, ಉದ್ಯೋಗ, ರಸ್ತೆ ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಪರಿಣಾಮಕಾರಿ ಪ್ರಗತಿಗೆ ಕಾರ್ಯಾಚರಣೆಯ ರೂಪದಲ್ಲಿ ಕ್ರಮ ಕೈಗೊಳ್ಳಬೇಕು.ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಯಾಣದ ಆಯಾ ಜಿಲ್ಲೆಗಳಿಗೆ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರ ಸಾರ್ವಜನಿಕ ಕಲ್ಯಾಣಕಾರಿ ಕೆಲಸಗಳ ಬಗ್ಗೆ ಅವ್ವಾಲು ನೀಡುವ ಸಂಘ ಸಂಸ್ಥೆಗಳಿಗೆ ಮತ್ತು ಸಂಘಟನೆಗಳಿಗೆ, ವ್ಯಕ್ತಿಗಳಿಗೆ ವಿಶೇಷ ಆದ್ಯತೆ ನೀಡಬೇಕು. ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಜನಮಾನಸದ ಉತ್ಸವ ರೂಪದಲ್ಲಿ ಆಚರಣೆಗೆ ಸರ್ಕಾರ  ವಿಶೇಷ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಲಾಯಿತು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಪರ ವಿಷಯಗಳಿಗೆ ಮತ್ತು ಕಲ್ಯಾಣ ಉತ್ಸವ ದಿನಾಚರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲಾ ಸಚಿವರು ವಿಶೇಷ ಆಸಕ್ತಿ ವಹಿಸಲು ಸಮಿತಿಯ ದುಂಡು ಮೇಜಿನ ಸಭೆ  ಒತ್ತಾಯಿಸಿದೆ.ಈ ಸಭೆಯಲ್ಲಿ ಶಿವಕುಮಾರ ಕಲಶೆಟ್ಟಿ,ಕೆ.ಮೋಹನ, ಸುಧಾಕರ್ ಎಸ್, ರಘುನಾಥ, ಶ್ರೀಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here