ಕಲಬುರಗಿ: 300 ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ | ಇಲಾಖೆಯ ವಿನೂತನ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ

0
270
– ಸಾಜಿದ್ ಅಲಿ ಕಲಬುರಗಿ

ಕಲಬುರಗಿ: ಹೆಣ್ಣು ಮಕ್ಕಳ ಆತ್ಮರಕ್ಷಣೆ ಹಿತದೃಷ್ಠಿಯಿಂದ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಸೇಲ್ಫ್ ಡಿಫೆಂಸ್ (ಸ್ವ-ಆತ್ಮರಕ್ಷಣೆ) ಮಾಡಿಕೊಳ್ಳುವ ಉದ್ದೇಶದಿಂದ ತರಬೇತಿಗಳು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಆರಂಭಿಸಿದೆ.

ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ತರಬೇತಿ ನೀಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ಶಾಲೆಗಳ ಹೆಣ್ಣು ಮಕ್ಕಳ ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಸೇಲ್ಫ್ ಡಿಫೆಂಸ್ ತರಬೇತಿ ಮಾಡಲಾಗುತ್ತಿದೆ. ಕರಾಟೆ ಕೋಚ್ ಗಳ ಕೊರತೆಯಿಂದ ಕೆಲವು ಕಡೆಗೆ ತರಬೇತಿ ಆರಂಭಿಸಿಲ್ಲ. ಶೀಘ್ರದಲ್ಲಿ ಆರಂಭಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. – ಬಿ.ಫೌಝಿಯಾ ತರನ್ನುಮ್, ಜಿಲ್ಲಾಧಿಕಾರಿ ಕಲಬುರಗಿ
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯಿತ್ ಸಿಇಓ ಭನವರ್ ಸಿಂಗ್ ಮಿನಾ ಅವರ ಮಾರ್ಗದರ್ಶನದಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಈ ಕರಾಟೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲಾಖೆಯಡಿಯಲ್ಲಿರುವ ಮೌಲಾನಾ ಅಜಾದ್ ಮಾದರಿ ಶಾಲೆಗಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿಂದುಳಿತದ ವರ್ಗಗಳ ಶಾಲೆಗಳಿಗೆ ವಿಸ್ತರಿಸುವ ಚಿಂತೆ ಇದೆ. – ಜಾವಿದ್ ಕೆ ಕರಂಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ. ಕಲಬುರಗಿ.

ವಿದ್ಯಾರ್ಥಿನಿಯರ ವಸತಿ ನಿಲಯಗಳು ಶಾಲಾ ಕಾಲೇಜುಗಳಿಂದ ದೂರ ಇವೆ. ಕಾಲೇಜು ಮುಗಿಸಿ ಪಾವಸ್ ಆಗುವ ವೇಳೆ ಅವರಿಗೆ ರೈಲ್ವೆ ಮತ್ತು ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ಮಾನಸಿ ಹಾಗೂ ದೈಹಿಕ, ದೌರ್ಜನ್ಯ ಘಟನೆಗಳ ನಡೆಯುತ್ತಿರುತವೇ. ಹೆಣ್ಣು ಮಕಳ್ಳಿಗೆ ಆತ್ಮರಕ್ಷಣೆಯ ಕೌಶಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಈ ತರಬೇತಿ ನೀಡಲಾಗುತ್ತಿದೆ.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯ 18 ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಈ ತರಬೇತಿ ಮಾಡಲಾಗುತ್ತಿದ್ದು, ಈಗಾಗಲೇ ನಗರ ಪ್ರದೇಶದ ಪೋಸ್ಟ್ ಮ್ಯಾಟ್ರಿಕ್ ಕೆ.ಎನ್.ಝಡ್ 1 ಮತ್ತು ಕೆ.ಎನ್.ಝಡ್ 2, ತಾವರಗೇರಾ, ವಿಶ್ವವಿದ್ಯಾಲಯ ಆವರಣದ ವಸತಿ ಶಾಲೆ, ಪಟೇಲ್ ನಗರ, ಮದಿನಾ ಕಾಲೋನಿ ಹಾಗೂ ವಿದ್ಯಾನಗರ ಸೇರಿ 7 ವಸತಿ ಶಾಲೆಗಳ 300 ವಿದ್ಯಾರ್ಥಿನಿಯರಿಗೆ ಯಶಸ್ವಿಯಾಗಿ ತರಬೇತಿ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ಕೆ ಕರಂಗಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದ 11 ಮಹಿಳಾ ವಸತಿ ಶಾಲೆಗಳಲ್ಲಿ ತರಬೇತಿ ಮಾಡಬೇಕಾಗಿದ್ದು, ಪ್ರತಿ ಭಾನುವಾರ ತರಬೇತಿ ನೀಡಲಾಗುತ್ತಿದೆ. ಎರಡು ಮೂರು ತರಬೇತಿಗಳು ಮಾಡಿದ್ದೇವೆ. ಸೇಲ್ಫ್ ಡಿಫೆಂಸ್ ಆತ್ಮರಕ್ಷಣೆ ಮಾಡಿಕೊಳ್ಳುವ ತರಬೇತಿಗಳಲ್ಲಿ ಥೇಯರಿ ಮತ್ತು ಟ್ರಾಯಲ್ ತರಬೇತಿ ಕಲಿಸುತ್ತಿದ್ದೇವೆ ಎಂದು ಅಂತರಾಷ್ಟ್ರೀಯ ಕರಾಟೆ ಕೋಚ್ ಮತ್ತು ಸಿಂಗಾಪುರನಲ್ಲಿ ನಡೆದ 2014ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ವಿಜತೆರಾದ ಜಮುನಾ ಕೆ ಶುಕ್ಲಾ ಅವರು ಮಾಹಿತಿ ನೀಡಿದ್ದಾರೆ.

ಪ್ರತಿಯೊಂದು ವಸತಿ ಶಾಲೆಗೆ ಮೂರು ತಿಂಗಳಲ್ಲಿ 12 ತರಬೇತಿ ನೀಡುವ ಉದ್ದೇಶ ಇದೆ. ವಾರದಲ್ಲಿ 3-4 ತರಬೇತಿ ಮಾಡುತ್ತಿದ್ದೇವೆ. ವಿದ್ಯಾರ್ಥಿನಿಯರಿಗೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವುದೇ ಮುಖ್ಯ ಗುರಿಯಾಗಿದೆ. ಈ ತರಬೇತಿಗಳಿಂದ ವಿದ್ಯಾರ್ಥಿಯರಿಗೆ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ಪೊರ್ಟ್ಸ್ (ಕ್ರೀಡಾ) ಪಟುಗಳಾಗ ಬೆಳೆಯಲು ಸಾಧ್ಯವಾಗುತ್ತಾರೆ. ಎಲ್ಲಕಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಆತ್ಮರಕ್ಷಣೆಯಲ್ಲಿ ಕ್ರೀಯಾಶೀಲರಾಗಿ ಬೆಳೆಯುತ್ತಾರೆ ಎಂದು ಜಮುನಾ ಕೆ ಶುಕ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆಯಲು 2-3 ವರ್ಷಗಳ ನಿರಂತರ ತರಬೇತಿ ಬೇಕಾಗುತ್ತದೆ. ಇದಕ್ಕೆ ವಿಶೇಷ ಕೋರ್ಸ್ ಗಳು  ಇರುತ್ತವೆ. 40 ಸಾವಿರ ಖರ್ಚು ಬರುತ್ತದೆ. ತರಬೇತಿ ಸೇರ್ಪಡೆಯಾಗುವರಿಗೆ ವೈಟ್ ಬೆಲ್ಟ್ ಎಂದು ಕರೆಯುತ್ತಾರೆ. ಮೂರು ತಿಂಗಳ ನಂತರ ಯಲ್ಲೊ ಬೆಲ್ಟ್, ಆರೆಂಜ್ ಬೆಲ್ಟ್, ಗ್ರಿನ್ ಬೆಲ್ಟ್, ಬಿಯೊ, ಪರಪಲ್, ಪರಪಲ್ ಗಾರ್ಡ್, ಬ್ರೌನ್ ಬೆಲ್ಟ್, ಬ್ರೌನ್ 1, ಬ್ಯೌನ್ 2 ಹಾಗೂ ಬ್ಲಾಕ್ ಬೆಲ್ಟ್ ಗೆ ಹೀಗೆ ಕೋರ್ಸ್ ಗಳು ಇವೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಸದ್ಯ ಸ್ಟ್ರೀಟ್ ಫೈಟ್, ಸ್ಪೊರ್ಟ್ಸ್ ಫೈಟ್ ತರಬೇತಿ ನೀಡುತ್ತಿದ್ದೇವೆ. “ಸ್ಟ್ರೀಟ್ ಫೈಟ್”ನಲ್ಲಿ ನಾವು ರೈಲ್ವೆ, ಬಸ್ ನಿಲ್ದಾಣ, ಶಾಲಾ-ಕಾಲೇಜು ಹಾಗೂ ಉದ್ಯೋಗ ಮುಗಿಸಿ ವಾಪಸ್ ಬರುವ ನಿರ್ಜನ ಪ್ರದೇಶದಲ್ಲಿ ಆಕಸ್ಮಾತ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಯತ್ನಿಸಿದರೇ ಹೇಗೆ ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ಕಲಿಸುತ್ತಿದ್ದೇವೆ.

ಸ್ಪೊರ್ಟ್ಸ್ ಫೈಟ್ ನಲ್ಲಿ ಯಾವುದೇ ರೀತಿಯ ಡ್ಯಾಮೇಜ್ (ಹಾನಿ) ಮಾಡುವುದು ಇರುವುದಿಲ್ಲ ಕೇವಲ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕರಾಟೆ ತರಬೇತಿಗಳ ಮೂಲಕ ಜೀವನ ಕಟ್ಟಿಕೊಳ್ಳಬಹುದು. ಕ್ರೀಡಾ ಪಟ್ಟುಗಳಾಗಿ ದೇಶದ ಕೀರ್ತಿ ಹೇಗೆ ಹೆಚ್ಚಿಸಲು ಮಾಡಿಕೊಲ್ಳುವ ಸಿದ್ಧತೆಗಳ ಬಗ್ಗೆ ತಿಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಯುವ ಆಸೆ ಇರುತ್ತದೆ. ದಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು. ಆ ಆಸೆ ಕೇವಲ ಆಸೆಯಾಗಿ ಉಳಿಯದೆ ಇದ್ದೊಂದು ಸ್ಪೊರ್ಟ್ಸ್ ಆಗಿ ಬೆಳೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬುದಾಗಿದೆ. – ಜಮುನಾ ಕೆ ಶುಕ್ಲಾ, ಅಂತರಾಷ್ಟ್ರೀಯ ಕರಾಟೆ ಕೋಚ್ ಮತ್ತು 2014ರ ಸಿಂಗಾಪುರ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ವಿಜತೆ.

ಇಲಾಖೆಯ ಮಟ್ಟದಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿರುವುದು ಸ್ವಾಗತಕರ ವಿಷಯ. ತರಬೇತಿಗಳು ಕೇವಲ ವಸತಿ ಶಾಲೆಗಳಿಗೆ ಸಿಮಿತಗೊಳ್ಳಿಸದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವಂತಹ ತರಬೇತಿಗಳು ನಡೆಸಬೇಕು. -ಶೈನಾಜ್ ಅಕ್ತರ್, ಸಮಾಜಿಕ ಕಾರ್ಯಕರ್ತೆ ಮತ್ತು ಮಹಿಳಾ ಪರ ಹೋರಾಟಗಾರ್ತಿ ಕಲಬುರಗಿ.

ಕರಾಟೆ, ಎನ್.ಸಿ.ಸಿ ತರಬೇತಿ ಇವೆಲ್ಲವೂ ಕೇವಲ ಪುರುಷರಿಗೆ ಮಾತ್ರ. ಹೆಣ್ಣು ಮಕ್ಕಳು ಕೇವಲ ಮನೆಗಳಿಗೆ ಸಮಿತಿಕೊಳ್ಳಿಸುವ ಹುನ್ನಾರಗಳ ನಡುವೆ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕರಾಟೆ ತರಬೇತಿ ನಿಜಕ್ಕೂ ಒಳ್ಳೆಯದಾಗಿದೆ. ಹೆಣ್ಣು ಮಕ್ಕಳಿಗೆ ಇಂತಹ ತರಬೇತಿಗಳು ತುಂಬಾ ಅಗತ್ಯವಾಗಿದೆ. – ರಿಯಾಝ್ ಖತೀಬ್, ಮಾನವ ಹಕ್ಕುಗಳ ಹೋರಾಟಗಾರರ ಮತ್ತು ಆರ್.ಟಿ.ಐ ಕಾರ್ಯಕರ್ತ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here