ಆದರ್ಶ ಮಕ್ಕಳು’ ಗೌರವ ಪುರಸ್ಕಾರ ಪ್ರದಾನ

0
67

ಕಲಬುರಗಿ: ಇವತ್ತಿನ ಸಮಾಜದಲ್ಲಿ ಮನುಷ್ಯತ್ವ, ಮಾನವೀಯತೆ ಕಳೆದು ಹೋಗುತ್ತಿದೆ. ನಮ್ಮ ಮಕ್ಕಳ ಬಗ್ಗೆ ಹಿಂದಿನ ಕಾಲದಲ್ಲಿ ಕುಟುಂಬದವರ ಬಗ್ಗೆ, ಅಕ್ಕ ಪಕ್ಕದವವರ ಬಗ್ಗೆ ಇದ್ದ ಪ್ರೀತಿ, ವಿಶ್ವಾಸ, ಮಮತೆ, ಕಾಳಜಿ ಇಂದು ಕಾಣುತ್ತಿಲ್ಲ. ಈ ಕುರಿತು ಇಂಥ ಕಾರ್ಯಕ್ರಮಗಳು ಆಗಾಗ ನಡೆಸುವ ಮೂಲಕ ಮಾನವೀಯ ಮೌಲ್ಯಗಳು ಬಿತ್ತುವ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಅಬಿಪ್ರಾಯಿಸಿದರು.

ಪ್ರೇಮಮಯಿ ಲಿಂ. ಚಂದ್ರಶೇಖರ ಪಾಟೀಲ ತೇಗಲತಿಪ್ಪಿ ಸ್ಮರಣಾರ್ಥ ವಿಶ್ವಜ್ಯೋತಿ ಪ್ರತಿಷ್ಠಾನವು ನಗರದ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ ಕರುಣಾಮಯಿಗಳಿಗೆ `ಆದರ್ಶ ಮಕ್ಕಳು’ ಗೌರವ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಂಸ್ಕøತಿ ಮತ್ತು ಸಂಸ್ಕಾರಗಳೇ ನಮ್ಮ ದೇಶದ ಗೌರವ ಮತ್ತು ಘನತೆ ಹೆಚ್ಚಿಸುತ್ತವೆ. ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕøತಿ, ಸಂಸ್ಕಾರ, ಸಂಬಂಧಗಳ ಬಗ್ಗೆ ಆಳವಾದ ಅರಿವು ಮೂಡಿಸಬೇಕು. ಆಗ ಇಂದಿನ ಸಮಾಜದಲ್ಲಿ ವೃದ್ಧಾಶ್ರಮಗಳ ಅಗತ್ಯವೇ ಇರುವುದಿಲ್ಲ ಎಂದರು.

Contact Your\'s Advertisement; 9902492681

ಜೇಡಿಎಸ್ ಮುಖಂಡ ಬಸವರಾಜ ಬಿರಬಿಟ್ಟೆ, ಜಿಲ್ಲಾ ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ಕಲ್ಯಾಣಕುಮಾರ ಶೀಲವಂತ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕಾರ್ಯಾಧ್ಯಕ್ಷ ಪ್ರಭವ ಪಟ್ಟಣಕರ್, ಪ್ರಮುಖರಾದ ಶಿವರಾಜ ಅಂಡಗಿ, ಶಿವಾನಂದ ಮಠಪತಿ, ಶಿಲ್ಪಾ ಜೋಶಿ,ರಾಜೇಂದ್ರ ಮಾಡಬೂಳ, ಡಾ. ಬಾಬುರಾವ ಶೇರಿಕಾರ, ಬಾಬುರಾವ ಪಾಟೀಲ, ಧರ್ಮಣ್ಣಾ ಹೆಚ್. ಧನ್ನಿ, ಶಕುಂತಲಾ ಪಾಟೀಲ ಜಾವಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಅಂಬುಜಾ ಶಿವರಾಯನಗೌಡ್ರು, ಸಂತೋಷ ಕುಡಳ್ಳಿ, ಗಣೇಶ ಚಿನ್ನಾಕಾರ, ಜಗದೀಶ ಮರಪಳ್ಳಿ, ಬಸ್ವಂತರಾಯ ಕೋಳಕೂರ, ಸಿದ್ಧರಾಮ ಹಂಚನಾಳ, ಇತರರಿದ್ದರು.

ಕರುಣಾಮಯಿಗಳಾದ ವಿಜಯಲಕ್ಷ್ಮೀ ಬಿ.ಎಸ್. ದೇಸಾಯಿ, ಶಾಂತಾಬಾಯಿ ಕೇದಾರನಾಥ ಕುಲಕರ್ಣಿ, ಶಶಿಕಲಾ ಈಶ್ವರಪ್ಪ ಮಾಂತೆ, ಸುಮಂಗಲಾ ಶಿವಲಿಂಗಪ್ಪ ಟೆಂಗಳಿ, ಸುಮಂಗಲಾ ಸಂಜೀವಕುಮಾರ ಯಲಮಡಗಿ ಅವರನ್ನು `ಆದರ್ಶ ಮಕ್ಕಳು’ ಗೌರವ ಪುರಸ್ಕಾರವನ್ನು ನೀಡಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here