ಕಲಬುರಗಿ: ಅನಧಿಕೃತ ವಾಟರ್ ಪ್ಲಾಂಟ್ ಗಳನ್ನು ಬಂದ್ ಮಾಡುವ ಮೂಲಕ ಕಲಬುರಗಿಯಲ್ಲಿ ಅಧಿಕಾರಿಗಳು ಹಾಗೂ ಸಚಿವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಗುಲಬರ್ಗಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸೋಸಿಯೇಷನ್ ಕಾರ್ಯದರ್ಶಿ ಮಂಜುನಾಥ ಪುಲ್ಸೆ ತಿಳಿಸಿದರು.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಡೆಯುತ್ತಿರುವ ಅನಧಿಕೃತ ವಾಟರ್ ಪ್ಲಾಂಟ್ ಗಳನ್ನು ಬಂದ್ ಮಾಡಿಸುವಂತೆ ಹಲವು ಬಾರಿ ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಈವರೆಗೆ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದರು.
ಆದರೆ ಇತ್ತಿಚಿಗೆ ಬಂದ ಪತ್ರಾಂಕಿತ
ಅಧಿಕಾರಿಗಳು ಅನಧಿಕೃತ ಪ್ಲಾಂಟ್ ಮುಚ್ಚಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇನ್ನು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದಾಗ ಅವರು ಕೂಡ ಈ ಬಗ್ಗೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಅನಧಿಕೃತ ವಾಟರ್ ಪ್ಲಾಂಟ್ ಬಂದ್ ಮಾಡಲು ಸಹಕಾರ ಮಾಡಿದ್ದಾರೆ ಎಂದು ಸಚಿವ ಪ್ರೀಯಾಂಕ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಆದರೆ ಕಲಬುರಗಿಯಲ್ಲಿ ಇನ್ನೂ ಸಹ ಅನಧಿಕೃತ ಪ್ಲಾಂಟ್ ಗಳು ನಡೆಯುತ್ತಿದ್ದು ಅವುಗಳನ್ನು ಸಹ ಬಂದ ಮಾಡಿಸುವ ಮೂಲಕ ಕಲಬುರಗಿ ಜನರಿಗೆ ಶುದ್ದ ಕುಡಿಯುವ ನೀರನ್ನು ನೀಡಲು ಸಹಕಾರ ಮಾಡುಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಸಮದ್, ಮುಖಂಡರಾದ ಮಹಮ್ಮದ್ ಮುಖಂದರ್, ಶಿವು ಕೋರಳ್ಳಿ, ಧನ್ಯಾಕುಮಾರ, ಸಂದೀಪ್ ಹುಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.