ಕಲಬುರಗಿ: ಇಲ್ಲಿನ ನವೋದಯ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘದ ವಾರ್ಷಿಕೋತ್ಸವ ಮಹಾಸಭೆ ಸೆ. 10ರಂದು ನಗರದ ಶಿವಶಕ್ತಿ ಬಡಾವಣೆಯ ಶಿವ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಶರ್ಮಾ, ಉಪಾಧ್ಯಕ್ಷ ಬಿ.ಆರ್. ಬುದ್ಧಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ ಸ್ಥಾಪನೆಗೊಂಡು 15 ವರ್ಷಗಳು ತುಂಬುತ್ತಿವೆ. ಸಂಘವು ಪ್ರತಿ ವರ್ಷ ಲಾಭದಾಯಕವಾಗಿ ಮುನ್ನಡೆಯಲ್ಲಿದೆ. ಖರ್ಚು ವೆಚ್ಚದ ವಿವರವನ್ನು ಸಭೆಗೆ ತಿಳಿಸಲಾಗುವುದು ಎಂದರು.
ಯಶವಂತ ಶಿಂಧೆ, ಲಕ್ಷ್ಮೀಕಾಂತ ಹೆಬಳಿ, ಶಂಕರ ಎಚ್. ಇತರರಿದ್ದರು.