ಕಲಬುರಗಿ: ಕಾಳಗಿ ತಾಲೂಕಿನ ಡಣ್ಣೂರ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಕಾಳಗಿ ತಾಲೂಕ ಅಧ್ಯಕ್ಷ ಶಾಂತಕುಮಾರ ಡಣ್ಣೂರ ಅವರ ಜನ್ಮದಿನದ ನಿಮಿತ್ತ ಕರವೇ ಜಿಲ್ಲಾಧ್ಯಕ್ಷ ಸಂದಿಪ ಭರಣಿ ನೆತೃತ್ವದಲ್ಲಿ ಶಾಲೆಯ 63 ಮಕ್ಕಳಿಗೆ ಉಡುಪು ವಸ್ತ್ರಗಳನ್ನು ವಿತರಿಸಲಾಯಿತು.
ಪೋಲಿಸ್ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ದೇಗಾಂವ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಗನ್ನಾಥ ಪಾಟೀಲ, ಶಾಲೆಯ ಮುಖ್ಯುಪಾಧ್ಯಯ ಮಲ್ಲಪ್ಪ, ಗಂಗಾರಾಮ, ಹಣಮಂತರಾಯ, ಗಂಗಮ್ಮ, ರೇಖಾ, ರೇಣುಕಾ, ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.