ಕಲಬುರಗಿ; ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಸಾವಳಗಿ ಸರಕಾರಿ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಬುಧವಾರ ಬೇಟಿ ನೀಡಿ ಅಲ್ಲಿನ ಅನೇಕ ಸಂಗತಿಗಳನ್ನು ಪರಿಶೀಲಿಸಿದರು.
ಆಸ್ಪತ್ರೆಗೆ ಹೋದರೆ ಸರಿಯಾಗಿ ಔಷಧಿ ವಿತರಿಸೋದಿಲ್ಲ, ಸಿಬ್ಬಂದಿ ಇರೋದೇ ಇಲ್ಲವೆಂಬ ಊರವರ ದೂರುಗಳನ್ನಾಧರಿಸಿ ಶಾಸಕರು ಈ ಭೇಟಿ ನೀಡಿದ್ದರು. ಶಾಸಕರ ಬೇಟಿ ಕಾಲದಲ್ಲಿ ಊರವರು ಆಸ್ಪತ್ರೆಯ ಅನೇಕ ಸಮಸ್ಯೆಗಳನ್ನು ವಿವರಿಸಿ ತಮಗಾದ ಅನುಭವ ಗಮನಕ್ಕೆ ತಂದರು.
ಸಾಸಕರು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡುತ್ತ ಇಲ್ಲಿಗೆ ಬರುವ ಜನರೊಂದಿಗೆ ಸೌಜನ್ಯದಿಂದ ಮಾತನಾಡಿ, ಉತ್ತಮ ನಡಾವಳಿ ಹೊಂದಿರುವಂತೆ ಸೂಚಿಸಿದರು. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿದ್ದು ಜನರಿಗೆ ಅನುಕೂಲ ಕಲ್ಪಿಸಬೇಕೆಂದರು.
ಆಸ್ಪತ್ರೆಯ ಸುತ್ತಮುತ್ತ ಭೂಕಬಳಿಕೆಯಾಗುತ್ತಿರುವುದ ಗಮನಕ್ಕೆ ಬಂದಿದೆ. ಇದನ್ನು ತಡೆಯಲು, ಆಸ್ಪತ್ರೆ ಭೂಮಿ ರಕ್ಷಿಸಲು ತಕ್ಷಣ ಆಸ್ಪತ್ರೆಗೆ ಆವರಣ ಗೋಡೆ ಅಗತ್ಯವಿದ್ದು ಮುಂದಿನ ದಿನಗಳಲ್ಲಿ ಅದನ್ನು ಇಲ್ಲಿ ಮಂಜೂರು ಮಾಡಲಾಗುತ್ತದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಇದಲ್ಲದೆ ಶಾಸಕರು ಸಾವಳಗಿ ಸಂತೆ ಪ್ರದೇಶಕ್ಕೂ ಭೇಟಿ ನೀಡಿ ಬಂದರು. ಸಂತೆ ಶುರುವಾಗಿ 5 ವಷರ್ರ್ರಗಲಾಗುತ್ತಿವೆ. ಈ ಹಂತದಲ್ಲಿ ಸಂತೆಗೆ ಅಗತ್ಯವಿರುವ ಮೂಲ ಸವಲತ್ತು ಮಂಜೂರು ಮಾಡುವ ಇರಾದೆಯೂ ಇದೆ ೆಂದು ಅಲ್ಲಂಪ್ರಭು ಪಾಟೀಲ್ ಊರವರಿಗೆ ಭರವಸೆ ನೀಡಿದ್ದಾರೆ. ಶೀಘ್ರವೇ ಸಾವಳಗಿ ಸಂತೆ ಮೈದಾನದಲ್ಲಿ ಏನೆಲ್ಲಾ ಅಗತ್ಯ ಬೇಕು ಅವನ್ನೆಲ್ಲ ಮಂಜೂರು ಮಾಡಲಾಗುತ್ತದೆ ಎಂದೂ ಶಾಸಕರು ಭರವಸೆ ನೀಡಿದ್ದಾರೆ.