ಪ್ರಜಾಪ್ರಭುತ್ವ ದಿನ ಆಚರಿಸೋಣ ಪ್ರಯೋಜನಗಳನ್ನು ಪಡೆಯೋಣ: ಡಾ.ಕೊಂಡಾ

0
59

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಹಾಗೂ ಐ.ಕ್ಯೂ.ಎ.ಸಿ. ಗಳ ಸಂಯುಕ್ತಾಶ್ರಯದಲ್ಲಿ ” ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ವನ್ನು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಓದುವದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿವರ್ಷ 15 ನೇ ಸೆಪ್ಟೆಂಬರ್ 2007 ರಿಂದ ವಿಶ್ವಸಂಸ್ಥೆ ಮತ್ತು ಅದರ ಸದಸ್ಯ ರಾಷ್ಟ್ರಗಳು ಪ್ರಜಾಪ್ರಭುತ್ವ ದಿನವನ್ನು ಸ್ಮರಿಸುತ್ತವೆ.ಪ್ರಜಾಪ್ರಭುತ್ವದ ಸ್ಥಿತಿಯನ್ನು ಪ್ರತಿಬಿಂಬಿಸಲು ಈ ದಿನ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ಶಾಂತಿ, ಸುಸ್ತಿರ ಅಭಿವೃದ್ಧಿ ಪ್ರಜಾಪ್ರಭುತ್ವದ ಅಂಶಗಳು ಈ ದಿನದಂದು ಪ್ರಜಾಪ್ರಭುತ್ವದಿಂದಾಗುವ 05 ಪ್ರಯೋಜನಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ನಾಗರಿಕರ ಹಿತಾಸಕ್ತಿಗಳ ರಕ್ಚಣೆ,ಸಮಾನತೆಯ ರಕ್ಚಣೆ,ಅಧಿಕಾರದ ದುರುಪಯೋಗ ತಡೆಗಟ್ಟುದು,ಮಾನವ ಹಕ್ಕುಗಳ ರಕ್ಷಣೆ,ದೇಶದಲ್ಲಿ ಶಾಂತಿ ಸ್ಥಾಪನೆ ಎಂದು ಕರೆನಿಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಾಗೇಂದ್ರ ಮಸೂತಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು, ರಾ.ಸೇ. ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ.ಮಹೇಶ ಗಂವ್ಹಾರ ಎಲ್ಲರನ್ನೂ ಸ್ವಾಗತಿಸಿದರು.

ಉಪನ್ಯಾಸಕಿ ಶ್ರೀಮತಿ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಐ.ಕ್ಯೂ ಎ.ಸಿ.ಸಂಯೋಜಕರಾದ ಡಾ.ಶಿವರಾಜ ಗೌನಳ್ಳಿ,ರಾ.ಸೇ.ಯೋ.ಅಧಿಕಾರಿಗಳಾದ ಡಾ.ರೇಣುಕಾ ಹಾಗರಗುಂಡಗಿ, ಸುಷ್ಮಾ ಕುಲಕರ್ಣಿ,ಡಾ.ಪ್ರೇಮಚಂದ್ ಚವ್ಹಾಣ, ಡಾ.ಚಂದ್ರಕಲಾ ಪಾಟೀಲ. ಉಮಾ ರೇವುರ,ವಿದ್ಯಾರ್ಥಿ ಸಂಘದ ಸಲಹೆಗಾರರಾದ ಮಂಗಲಾ ಬಿರಾದರ,ಡಾ.ಶರಣಮ್ಮ ಕುಪ್ಪಿ ,ಡಾ.ಮುಖಿಮಿಯಾ,ಡಾ ಉಸ್ತಾದ ರಶಿದ,ಶ್ರೀ ಶರಣಪ್ಪ ಮುಷ್ಟಳ್ಳಿ, ಶಿಲ್ಪಾ ಬಂದರವಾಡ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಎಂದು ನ್ಯಾಕ ಸಂಯೋಜಕರಾದ ಡಾ.ಮೋಹನರಾಜ್ ಪತ್ತಾರ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here