ಹಿಂದಿ ವಿಶ್ವದ ಶಕ್ತಿಶಾಲಿ ಭಾಷೆಯಾಗಿ ಹೊರಹೊಮ್ಮುತ್ತಿದೆ: ಬಿರಾಜ್ದಾರ್

0
26

ಕಲಬುರಗಿ: ಇಂದು ಹಿಂದಿ ಭಾಷೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಕ್ತಿಶಾಲಿ ಭಾಷೆಯಾಗಿ ಹೊರಹೊಮ್ಮುತ್ತಿದೆ ಎಂದು ಸೋಲಾಪುರದ ಹಿಂದಿ ಭಾಷೆ ಕಥೆಗಾರ ಮತ್ತು ಅಖಿಲ ಭಾರತ ಹಿಂದಿ ಮಹಾಸಭಾದ ರಾಷ್ಟ್ರೀಯ ಮಂತ್ರಿಗಳಾದ ಪ್ರೊ. ಧನ್ಯಕುಮಾರ್ ಬಿರಾಜ್ದಾರ್ ಅವರು ಇಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಮತ್ತು ಅಖಿಲ ಭಾರತ ಹಿಂದಿ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಹಿಂದಿ ದಿವಸ್ – 2023 ಅನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಭಾಷೆಯನ್ನು ಬೋಧಿಸಲಾಗುತ್ತಿದೆ. ವಿಶ್ವದ ಮೂರನೇ ಶಕ್ತಿಶಾಲಿ ಭಾಷೆಯಾಗಿ ಮತ್ತು ಸರಳ ಭಾಷೆಯಾಗಿ ಹೊರಹೊಮ್ಮಿದೆ ಎಂದು ನುಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಹಿಸಿಕೊಂಡು ಹಿಂದಿ ಭಾಷೆಯ ಮಹತ್ವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಹಿಂದಿ ಓದುವುದರಿಂದ ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದ ನಾನಾ ಭಾಗದಲ್ಲಿ ಕೆಲಸದ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಹಿಂದಿ ದಿವಸ್ ಸಂದರ್ಭದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಾವಿದ್ಯಾಲಯ ಮತ್ತು ಅಖಿಲ ಭಾರತ ಹಿಂದಿ ಮಹಾಸಭಾಗಳ ಮದ್ಯದಲ್ಲಿ ಒಡಂಬಡಿಕೆ ಒಪ್ಪಂದವನ್ನೂ ಮಾಡಿಕೊಂಡರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಕಾರ್ಯಕ್ರಮದಲ್ಲಿ ಅತಿಥಿಗಳ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕು. ಸಂಜನಾ ಚವ್ಹಾಣ ಅವರು ವಂದಿಸಿದರು. ಕು. ಅಂಜಲಿ ಯಾದವ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕು. ಝಲಕ್ ಪರ್ಮಾರ್ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಹಿಂದಿ ದಿವಸ್ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಶ್ರೀಮತಿ ಕವಿತಾ ಠಾಕೂರ ನಡೆಸಿ ಕೊಟ್ಟರು. ಶ್ರೀಮತಿ ಸುಷ್ಮಾ ಕುಲಕರ್ಣಿ ಅವರು ಒಡಂಬಡಿಕೆ ಒಪ್ಪಂದದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ಮಹೇಶ ಗಂವ್ಹಾರ, ಡಾ. ನಾಗೇಂದ್ರ ಮಸೂತಿ, ಡಾ. ವಿಜಯಕುಮಾರ್ ಪರುತೆ, ಡಾ. ಚಂದ್ರಕಲಾ ಪಾಟೀಲ್, ಶಿವಲೀಲಾ ಧೋತ್ರೆ, ರೇಣುಕಾ ಎಚ್. ಶರಣಮ್ಮ ಕುಪ್ಪಿ, ಡಾ. ಸವಿತಾ ಬಿ. ಡಾ. ಸುಭಾಷ್ ದೊಡ್ಡಮನಿ, ಡಾ. ಜ್ಯೋತಿಪ್ರಕಾಶ್ ಡಿ. ಶರಣಪ್ಪ, ಡಾ. ನಾಗರತ್ನ, ಡಾ ಮುಕೀಮ್ ಮಿಯಾ, ವಿಶ್ವನಾಥ್ ದೇವರಮನಿ, ಕವಿತಾ ಎಂ. ಮಮತಾ ಮೆಲ್ಕುಂದಿ, ಸುಮನ್ ವಾಯ್, ಅಶ್ವಿನಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ನ್ಯಾಕ ಸಂಯೋಜಕರಾದ ಡಾ.ಮೋಹನರಾಜ್ ಪತ್ತಾರ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here