ಬೆಳೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 100ಕಿಮಿ ಪಾದಯಾತ್ರೆ

0
18

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಭೂಮಿ ಹಸಿ ಜಾಸ್ತಿಯಾಗಿ ತೊಗರಿ ಬೇರು ಕೊಳೆತು ಹೋಗಿ ತೋಗರಿ ಬೆಳೆಗೆ ಆಣೆವಾರು ಪರಿಹಾರ ಘೋಷಿಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ KPRS ವತಿಯಿಂದ ಶನಿವಾರ 100 ಕಿಮಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸದರು.

ವಿದೇಶದಿಂದ  3 .6  ಲಕ್ಷ ಟನ್ ತೊಗರಿ ಆಮದು ಮಾಡಿಕೊಂಡು. ಇಂಪೋರ್ಟ್ ಡಿವುಟಿ ಹಾಕಲಾರದೆ ಇದ್ದ ಹೊರದೇಶದ ತೊಗರಿ ಬೆಳೆಗಾರರಿಗೆ 10000 ರೂ ಬೆಂಬಲ ಬೆಲೆ ಕೊಟ್ಟು, ತೋಗರಿ ನಾಡಿನ ತೋಗರಿ ಬೆಳೆಗಾರರಿಗೆ ಕಡೆಗಣಿಸಿ ಬೆಂಬಲ ಬೆಲೆ ಘೋಷಣೆ ಮಾಡಲಾರದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಕೇಂದ್ರ ಸರ್ಕಾರದ ನೀತಿ ಖಂಡಿಸಿ ಹೊರದೇಶದ ತೊಗರಿ ಮೇಲೆ ಶೇ%50 ರಷ್ಟು ಇಂಪೋರ್ಟ್ ಡಿವುಟಿ ಹಾಕಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ರಾಜ್ಯದ ರೈತರ ಸಾಲ ಮನ್ನಕ್ಕಾಗಿ, ಬೆಳೆ ವಿಮಾ ಹಣ ಕಟ್ಟಿದ್ದ ಎಲ್ಲಾ ರೈತರಿಗೆ ವಿಮೆ ಹಣ ರೈತರ ಖಾತೆಗೆ ಜಮಾ ಮಾಡಲು ಒತ್ತಾಯಿಸಿ, ಕಬ್ಬು ಬೆಳೆಗಾರರಿಗೆ ಕಬ್ಬು ತೂಕದಲ್ಲಿ ಅನ್ಯಾಯ ಮಾಡುವುದು ತಡೆಗಟ್ಟಲು ಆಗ್ರಹ, ಪ್ರತಿ ಟನ್ ಕಬ್ಬಿಗೆ 5000 ರೂಪಾಯಿ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ರೈತರು ಚಿಂಚೋಳಿಯಿಂದ ಕಲಬುರಗಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ 100 ಕೀ ಮೀ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರು ಜಿ ಕೆ ಗೋಖಲೆ ಅವರು ರೈತರ ಪಾದಯಾತ್ರೆಗೆ ಸ್ವಾಗತಿಸಿದರು. ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನೂಮ್ ಅವರು ಪ್ರತಿಭಾಟನ ಸ್ಥಳಕ್ಕೆ ಖುದ್ದು ಬೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ರೈತರೊಂದಿಗೆ ಮಾತನಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟ್ಟಿ ನೂರಾರು ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here