ಸಸಿಗಳು ನೆಡುವುದಷ್ಟೆ ಮುಖ್ಯವಲ್ಲ ಅವುಗಳ ಸಂರಕ್ಷಣೆ ಮುಖ್ಯ: ಕಲಕೇರಿ

0
51

ಸುರಪುರ: ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗು ಕಾಯಕ ಗ್ರಾಮೀಣ ಮತ್ತು ಶಿಕ್ಷಣಾಭೀವೃಧ್ಧಿ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಸತ್ಯಂಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಡಲಾದ ಸಸಿಗಳಿಗೆ ತಂತಿ ಬೇಲಿ ಹಾಕುವ ಮೂಲಕ ಸಂರಕ್ಷಣಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶಿವುಕುಮಾರ ಕಲಕೇರಿ ಮಾತನಾಡಿ,ಅನೇಕರು ಪರಿಸರ ದಿನಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ನಂತರ ಅತ್ತ ತಿರುಗಿಯೂ ನೋಡದಂತೆ ಬಿಡುತ್ತಾರೆ.ಇದರಿಂದ ಪರಿಸರ ಬೆಳಸಿದಂತಾಗಲಿ ಅಥವಾ ಸಸಿ ರಕ್ಷಿಸಿದಂತಾಗದು.ಸಸಿ ನೆಟ್ಟಷ್ಟೆ ಕಾಳಜಿಯನ್ನು ಜನ ಮತ್ತು ಜಾನವಾರುಗಳಿಂದ ಹಾಳಾಗದಂತೆ ಅವುಗಳ ಬೆಳವಣಿಗೆ ಕಡೆಗೂ ಗಮನ ಹರಿಸುವುದು ಮುಖ್ಯವಾಗಿದೆ ಎಂದರು.

Contact Your\'s Advertisement; 9902492681

ಕಾಯಕ ಟ್ರಸ್ಟ್ ಅಧ್ಯಕ್ಷ ನಾಗಭೂಷಣ ಯಾಳಗಿ ಮಾತನಾಡಿ,ಇಂದು ಮೊದಲ ಹಂತವಾಗಿ ಸತ್ಯಂಪೇಟೆಯ ಶಾಲಾ ಆವರಣದಲ್ಲಿರುವ ಸಸಿಗಳಿಗೆ ತಂತಿ ಬೇಲಿ ಅಳವಡಿಸುವ ಮೂಲಕ ಸಸಿಗಳ ಬೆಳೆಸಲು ಮುಂದಾಗಲಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ನೆಡಲಾದ ಸಸಿಗಳಿಗೆ ತಂತಿ ಬೇಲಿ ಅಳವಡಿಸುವ ಯೋಜನೆ ಹೊಂದಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನೆಡಲಾದ ಸುಮಾರು ಹದಿನೈದು ಸಸಿಗಳಿಗೆ ತಂತಿ ಬೇಲಿ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ವೆಂಕಟೇಶ ಶುಕ್ಲಾ, ವಿರುಪಾಕ್ಷಿ ಮಕಾಶಿ,ಶಿವರಾಜ ಮಕಾಶಿ,ಗೋಪಾಲ ದೇವರಮನಿ ಹಾಗು ಶಾಲಾ ಶಿಕ್ಷಕರಾದ ಮುಖ್ಯಗುರು ನಿಂಗಪ್ಪ ಸಹಶಿಕ್ಷಕಿಯರಾದ ರೇಣುಕಾ ಕಮತಗಿ,ಆರತಿ ಮೇಡಂ ಮತ್ತು ಕುಮಾರ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಗು ಮಕ್ಕಳುಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here