ಲಿಂಗಾಂಗ ಯೋಗ ಒಂದೇ ಎಂದ ಗುಡ್ಡಾಪುರದ ದಾನಮ್ಮದೇವಿ

0
26

ಕಲಬುರಗಿ: ಅಂಗ ಲಿಂಗ ಬೇರೆ ಅಂದು ತಿಳಿದುಕೊಳ್ಳದೆ ಲಿಂಗಾಂಗ ಒಂದೇ ಎಂಬ ಹಂಬಲದಿಂದ ಬಸವಾದಿ ಶರಣರ ವಿಚಾರಗಳಿಗೆ ಮಾರು ಹೋದ ಉಮ್ರಾಣಿಯ ಲಿಂಗಮ್ಮ 21 ದಿನಗಳ ಕಾಲ ಬಸವಕಲ್ಯಾಣ ಸಮೀಪದ ನಾರಾಯಪುರ ಬಳಿ ಲಿಂಗಾನುμÁ್ಠನ ಕೈಗೊಂಡಿದ್ದರು ಎಂದು ಗುಲ್ಬರ್ಗ ವಿವಿ ವಿಶ್ರಾಂತ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ತಿಳಿಸಿದರು.

ಬಸವ ಸಮಿತಿ, ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಲಿಂ. ಶರಣಪ್ಪ ಶಿವಲಿಂಗಪ್ಪ ದಂಡೆ, ಮಾತೋಶ್ರೀ ಬಂಡಮ್ಮ ಶರಣಪ್ಪ ದಂಡೆ ಸ್ಮರಣಾರ್ಥ ಅರಿವಿನ ಮನೆ 267ನೇ ಕಾರ್ಯಕ್ರಮದಲ್ಲಿ ಶರಣೆ ಗುಡ್ಡಾಪುರ ದಾನಮ್ಮ ವಿಷಯ ಕುರಿತು ಮಾತನಾಡಿದ ಅವರು, ಲಿಂಗಮ್ಮನಿಗೆ ವರದಾನಿ ದಾನಮ್ಮನಾಗಿ ಪ್ರಸಿದ್ಧಿಯಾಗು ಎಂದು ಹೇಳಿದ್ದರು ಎಂಬದನ್ನು ವಿವರಿಸಿದರು.

Contact Your\'s Advertisement; 9902492681

ತನ್ನ ಮದುವೆ ಜೊತೆ 501 ಜೋಡಿಗಳ ಮದುವೆ ಕೂಡ ಆಗಬೇಕೆಂದುಕೊಂಡಿದ್ದ ದಾನಮ್ಮನ ವಿವಾಹ ಸಂಗಮನಾಥನ ಜೊತೆ ಆಯಿತು. ಬಸವಣ್ಣ ಕೂಡ ನೀಲಾಂಬಿಕೆಯ ಜೊತೆ ಸಂಕ ಗ್ರಾಮಕ್ಕೆ ಆಗಮಿಸಿ ಇವರ ಮದುವೆಗೆ ಸಾಕ್ಷಿಯಾಗಿದ್ದರು ಎಂಬುದಕ್ಕೆ ಇಂದಿಗೂ ಅಲ್ಲಿ ಬಸವಣ್ಣ- ನೀಲಾಂಬಿಕೆ ಸ್ಮಾರಕಗಳಿರುವುದನ್ನು ಕಾಣಬಹುದು ಎಂದು ಹೇಳಿದರು.

ಗುಡ್ಡಾಪುರದಲ್ಲಿ ದಾನಮ್ಮಳಿಗೆ ಪೂಜೆ ಮಾಡಲು ಪತಿ ಸಂಗಮನಾಥ ವ್ಯವಸ್ಥೆ ಮಾಡಿರುತ್ತಾನೆ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ರಕ್ಷಣೆಗಾಗಿ ಶ್ರೀಶೈಲದೆಡೆಗೆ ನಡೆದರು ಎಂಬ ಮಾಹಿತಿ ಲಭ್ಯವಿದೆ ಎಂದು ತಿಳಿಸಿದರು.

ಹೈದರಾಬಾದ್ ಸಂಸ್ಥಾನ ವಿಮೋಚನೆ: ಅಮೃತ ಮಹೋತ್ಸವ ವಿಷಯ ಕುರಿತು ಮಾತನಾಡಿದ ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಇಡೀ ದೇಶಕ್ಕೆ1947 ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿದರೆ ಸ್ವತಂತ್ರ ಸಂಸ್ಥಾನವಾಗಿದ್ದ ಹೈದರಾಬಾದ್ ಸಂಸ್ಥಾನವನ್ನು ಮೀರ್ ಉಸ್ಮಾನ ಅಲಿ ಖಾನ್ ಆಳ್ವಿಕೆ ನಡೆಸುತ್ತಿದ್ದ. ಭಾರತ ಸರ್ಕಾರ ನಡೆಸಿದ ಪೆÇಲೀಸ್ ಕಾರ್ಯಾಚರಣೆಯಿಂದ 1948 ಸೆ. 17ರಂದು ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾಗುತ್ತದೆ ಎಂದರು.

ನಿಜಾಮ ಅರಸ ಒಳ್ಳೆಯ ಆಲೋಚನೆ ಹೊಂದಿದ್ದರೂ ರಜಾಕರ ಸೈನ್ಯ ಪಡೆಯ ಮುಖ್ಯಸ್ಥ ಕಾಶಿಂ ರಜ್ವಿಯ ಹುಚ್ಚಾಟ, ಉಪಟಳಕ್ಕೆ ಆಗ ಈ ಪ್ರದೇಶ ನಲುಗಿ ಹೋಗಿತ್ತು ಎಂದರು.

ಭಾರತದ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಎಂದು ಗುರುತಿಸಲಾಗುವ ಈ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಈ ಭಾಗದ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ತಿಳಿಸಿದರು.

ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್. ವಾಲಿ, ಬಂಡಪ್ಪ ಖೇಸೂರ, ಡಾ. ವೀರಣ್ಣ ದಂಡೆ, ಡಾ. ಶಿವಪುತ್ರ ಮಾವಿನ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here