ಮಹಿಳಾ ಮೀಸಲಾತಿ ಮಸೂದೆ ಮಂಡನೆ : ಭಾಜಪ ಮಹಿಳಾ ಮೋರ್ಚಾ ಹರ್ಷ

0
37

ಶಹಾಬಾದ :ಹೊಸ ಪಾರ್ಲಿಮೆಂಟ ಭವನದಲ್ಲಿ ಮೊದಲ ದಿನವೇ ಮಹಿಳೆಯಿರಿಗೆ ಶೇ33 ಸ್ಥಾನ ಮೀಸಲಾತಿ ಮಸೂದೆಯನ್ನು ಸರಕಾರ ಮಂಡನೆ ಮಾಡಿರುವುದು ಶಾಸನ ಸಭೆಯಲ್ಲಿ ಮಹಿಳೆಯರ ಶಕ್ತಿ ಹೆಚ್ಚಾಗುವಂತೆ ಮಾಡಿದೆ. ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ ಮತ್ತು ನಗರ ಮಹಿಳಾ ಅಧ್ಯಕ್ಷೆ ಜಯಶ್ರೀ ಸೂಡಿ ಹರ್ಷ ವ್ಯಕ್ತಪಡಿಸಿದರು.

ಅವರು ಗುರುವಾರ ಬಿಜೆಪಿ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ವರ್ಷಗಳಿಂದ ಮಹಿಳಾ ಮೀಸಲಾತಿ ನಿರೀಕ್ಷಣೆಯಲ್ಲಿದ್ದವರಿಗೆ ಎನಡಿಎ ಸರಕಾರ ಇದಕ್ಕೆ ಮಹತ್ವ ನೀಡಿ ವಿದೇಯಕ ಮಂಡನೆ ಮಾಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೆವೆ.

Contact Your\'s Advertisement; 9902492681

ದೇಶದ ಅರ್ಧದಷ್ಟು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಅವರುಗಳ ಸಮಸ್ಯೆಗಳನ್ನು ಕಂಡುಕೊಳ್ಳಲು ಉತ್ತಮ ವೇದಿಕೆ ಅತಿ ಮುಖ್ಯವಾಗಿದ್ದು, ಮೀಸಲಾತಿಯ ಕ್ರಮ ಕೈಗೊಂಡು ಅವಕಾಶ ಕಲ್ಪಿಸಿದಂತಾಗಿದೆ. ರಾಜ್ಯ ಸಭೆ ಸೇರಿದಂತೆ ರಾಜ್ಯದ ವಿಧಾನ ಸಭೆಗಳು ಇದಕ್ಕೆ ಬೆಂಬಲ ನೀಡಬೇಕು. ಇದರಿಂದ ಪ್ರಪಂಚದಲ್ಲಿ ಮಾದರಿಯಾದ ಪ್ರಜಾಪ್ರಭುತ್ವ ನಮ್ಮದಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಶಿಕಲಾ ಸಜ್ಜನ, ಪದ್ಮಾ ಕಟಗಿ, ರತ್ನಾ ಬಿರಾದಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here